ಸನ್ಮಾರ್ಗ ವಾರ್ತೆ
ಮುಂಬೈ, ಮಾ. 4: ಮುಸ್ಲಿಂ ಮೀಸಲಾತಿ ವಿಷಯದಲ್ಲಿ ಮಹಾರಾಷ್ಟ್ರ ಸರಕಾರ ಕುಸಿದರೆ ಶಿವಸೇನೆಗೆ ಬೆಂಬಲ ನೀಡುವುದಾಗಿ ಬಿಜೆಪಿ ನಾಯಕ ಸುಧೀರ್ ಮುಗಂದಿವಾರ್ ತಿಳಿಸಿದಾರೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇ. 5 ಮೀಸಲಾತಿ ನೀಡುವ ಕುರಿತು ರಾಜ್ಯ ಸರಕಾರದಲ್ಲಿ ವಿವಾದ ಇದೆ. ಮೀಸಲಾತಿ ವಿಷಯದಲ್ಲಿ ಉದ್ಧವ್ ಠಾಕ್ರೆ ಉತ್ತಮ ನಿಲುವು ಕೈಗೊಂಡಿದ್ದಾರೆ. ಆಶಯದ ಆಧಾರದಲ್ಲಿ ಬಿಜೆಪಿ-ಶಿವಸೇನೆ ಸರಕಾರ ಇತ್ತು. ಕಾಂಗ್ರೆಸ್-ಎನ್ಸಿಪಿ ಬೆಂಬಲ ಹಿಂಪಡೆದರೆ ಶಿವಸೇನೆ ಹೆದರಬೇಕಾಗಿಲ್ಲ ಎಂದು ಅವರು ಹೇಳಿದರು.
ಯಾಕೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡುವುದು? ಸಿಕ್ಖರು, ಕ್ರೈಸ್ತರು ಯಾವ ಅಪರಾಧ ಮಾಡಿದ್ದಾರೆ? ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರಕಾರ ಶೇ. 10 ಮೀಸಲಾತಿ ನೀಡಿದೆ. ಇದರಲ್ಲಿ ಮುಸ್ಲಿಮರೂ ಬರುತ್ತಾರೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ. 5ರಷ್ಟು ಮೀಸಲಾತಿ ನೀಡುವುದಾಗಿ ಎನ್ಸಿಪಿ ಹೇಳಿತ್ತು. ಆದರೆ, ಮೀಸಲಾತಿ ವಿಷಯದಲ್ಲಿ ತೀರ್ಮಾನ ಆಗಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.












