ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 6: ಬಾಬರಿ ಮಸೀದಿ ಜಮೀನು ತೀರ್ಪಿನ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಪರಿಹಾರಕ ಅರ್ಜಿ ಸಲ್ಲಿಸಿದೆ. ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಕೌನ್ಸಿಲ್ ತೀರ್ಮಾನ ಪ್ರಕಾರ ಉತ್ತರ ವಲಯ ಕಾರ್ಯದರ್ಶಿ ಅನೀಸ್ ಅನ್ಸಾರಿ ಅರ್ಜಿ ಸಲ್ಲಿಸಿದ್ದಾರೆ. ಬಾಬರಿ ಮಸೀದಿ ಜಮೀನು ರಾಮಮಂದಿರ ಕಟ್ಟಲು ಬಿಟ್ಟುಕೊಟ್ಟ 2019 ನವೆಂಬರ್ 9ರ ಸುಪ್ರೀಂಕೋರ್ಟಿ ತೀರ್ಪಿಗೆ ತಡೆಯಾಜ್ಞೆ ನೀಡಬೇಕು, ತೀರ್ಪಿನ ಪ್ರಕಾರ ಕ್ರಮಕೈಗೊಳ್ಳದಂತೆ ಕೇಂದ್ರ ಸರಕಾರವನ್ನು ತಡೆಯಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಪ್ರಕರಣದಲ್ಲಿ ಕಕ್ಷಿ ಅಲ್ಲದಿದ್ದರೂ ಸುಪ್ರೀಂಕೋರ್ಟಿನ ತೀರ್ಪು ತಮ್ಮ ಹಿತಾಸಕ್ತಿ, ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.
ಈ ಹಿಂದೆ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ 18 ಪುನರ್ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟು ತಿರಸ್ಕರಿಸಿತ್ತು












