ಸನ್ಮಾರ್ಗ ವಾರ್ತೆ
ಮುಂಬೈ, ಮಾ. 7: ಬಿಜೆಪಿಯಿಂದ ಶಿವಸೇನೆ ದೂರವಾದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದು ಬಿಜೆಪಿಯಿಂದ ದೂರವಾಗಿದ್ದೇವೆ. ಹಿಂದುತ್ವದಿಂದಲ್ಲ ಎಂದು ಹೇಳಿದ್ದಾರೆ. ಅಂತಹ ಅಭಿಪ್ರಾಯ ತಪ್ಪು. ಹಿಂದುತ್ವ ಮತ್ತು ಬಿಜೆಪಿಗೆ ಸಂಪೂರ್ಣ ವ್ಯತ್ಯಾಸ ಇದೆ ಎಂದಿದ್ದಾರೆ. ಅಯೋಧ್ಯೆಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಿದ್ದರು.
ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿ ಕೊಡಲಾಗುವುದು. ಇದನ್ನು ಮಹಾರಾಷ್ಟ್ರ ಸರಕಾರ ಕೊಡುತ್ತಿಲ್ಲ. ಒಂದು ವರ್ಷದಲ್ಲಿ ಮೂರು ಬಾರಿ ಅಯೋಧ್ಯೆಗೆ ಬಂದಿದ್ದೇನೆ ಎಂದು ಅವರು ಹೇಳಿದರು. ಉದ್ಧವ್ರೊಂದಿಗೆ ಅವರ ಪುತ್ರ ಸಚಿವ ಆದಿತ್ಯಠಾಕ್ರೆ, ಸಂಜಯ್ ರಾವತ್ ಇದ್ದರು.












