ಸನ್ಮಾರ್ಗ ವಾರ್ತೆ
ಕೊಚ್ಚಿ, ಮಾ. 7: ಮೀಡಿಯ ವನ್ ಮತ್ತು ಏಷ್ಯನೆಟ್ ನ್ಯೂಸ್ಗೆ ಹೇರಲಾದ ನಿಷೇಧವನ್ನು ಹಿಂಪಡೆದದ್ದರ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶ ಸಹ ಸಚಿವ ವಿ. ಮುರಳೀಧರನ್ ಅವರು ಕಾನೂನು ಪಾಲಿಸದ್ದರಿಂದ ಮತ್ತು ವಾಸ್ತವ ವಿರುದ್ಧ ವಿಷಯಗಳನ್ನು ವರದಿ ಮಾಡಿದ್ದಕ್ಕೆ ನಿಷೇಧ ಹೇರಲಾಗಿತ್ತು ಎಂದಿದ್ದಾರೆ. ಆದರೆ ಏಷ್ಯನೆಟ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ನಿಷೇಧ ತೆರವುಗೊಳಿಸಲಾಯಿತು. ಒಂದೇ ವಿಷಯದಲ್ಲಿ ಎರಡು ಶಿಕ್ಷೆ ನೀಡಲು ಸಾದ್ಯವಿಲ್ಲ ಎನ್ನುವುದರಿಂದ ಮೀಡಿಯ ವನ್ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ವಿ. ಮುರಳೀಧರನ್ ಹೇಳಿದರು.
ಜನರ ರೋಷಕ್ಕೆ ಹೆದರಿ ನಿಷೇಧ ಹಿಂಪಡೆಯಲಾಯಿತೆಂದು ಮೀಡಿಯ ವನ್ ಡೈರಕ್ಟರ್ ಅವರ ವಾದವನ್ನು ಅವರು ತಿರಸ್ಕರಿಸಿದರು. ಮಾಧ್ಯಮ ಸ್ವಾತಂತ್ರ್ಯ ಎಂಬ ಮೌಲ್ಯಕ್ಕಾಗಿ ಜೈಲಿಗೆ ಹೋದವರು ಬಿಜೆಪಿ ನಾಯಕರು. ಆದರೆ ದೇಶದ ಕಾನೂನನ್ನು ಅನುಸರಿಸಲು ಮಾಧ್ಯಮಗಳು ಕೂಡ ಹೊಣೆಗಾರರು. ಆರೆಸ್ಸೆಸ್ ವಿರುದ್ಧ ವರದಿ ಮಾಡಬಹುದು. ಆದರೆ ದ್ವೇಷದ ರೀತಿಯಲ್ಲಿ ವಾರ್ತೆ ನೀಡುವಂತಿಲ್ಲ. ಜೈಶ್ರೀರಾಂ ಹೇಳದ್ದರಿಂದ ಹೊಡೆದರು. ಮಸೀದಿ ಒಡೆಯಲಾಯಿತು ಎಂಬ ವಾರ್ತೆಗಳು ಸತ್ಯಕ್ಕೆ ದೂರವಾಗಿದೆ. ಇದು ಸಮಸ್ಯೆ ಎಂದು ವಿ. ಮುರಳೀಧರನ್ ಹೇಳಿದರು.












