ಕೊರೊನಾ: ಜಮ್ಮು, ಸಾಂಬಾ ಜಿಲ್ಲೆಯ ಶಾಲೆ ಬಂದ್

0
531

ಸನ್ಮಾರ್ಗ ವಾರ್ತೆ

ಜಮ್ಮು, ಮಾ. 7: ಕೊರೊನಾ ವೈರಸ್ ವರದಿಯಾದ ಮೇಲೆ ಜಮ್ಮು ಕಾಶ್ಮೀರದ ಎರಡು ಜಿಲ್ಲೆಗಳ ಪ್ರಾಥಮಿಕ ಶಾಲೆಗಳಿಗೆ ರಜೆ ಸಾರಲಾಗಿದೆ. ಜಮ್ಮು, ಸಾಂಬ ಜಿಲ್ಲೆಗಳ ಶಾಲೆಗೆ ಮಾರ್ಚ್ 31ರವರೆಗೆ ರಜೆ ನೀಡಲಾಗಿದೆ ಎಂದು ಜಮ್ಮು ಕಾಶ್ಮೀರ ಸರಕಾರದ ಪ್ರಿನ್ಸಿಪಲ್ ಕಾರ್ಯದರ್ಶಿ ರೋಹಿತ್ ಕನ್ಸಲ್ ತಿಳಿಸಿದರು.

ಇಟಲಿ, ದಕ್ಷಿಣ ಕೊರಿಯಕ್ಕೆ ಹೋಗಿ ಬಂದವರಲ್ಲಿ ಇಬ್ಬರಿಗೆ ಜಮ್ಮು ಕಾಶ್ಮೀರದಲ್ಲಿ ಕೊರೊನಾ ತಗಲಿದೆ ಎಂದು ವರದಿಯಾಗಿತ್ತು. ಇವರಿಗೆ ಜಮ್ಮು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಆರೋಗ್ಯ ತೃಪ್ತಿಕರ ಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಈವರೆಗೆ 31 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು ಇವರಲ್ಲಿ ಹದಿನಾರು ಮಂದಿ ಇಟಲಿಯ ಪ್ರಜೆಗಳಾಗಿದ್ದಾರೆ.