ರೂಪಾಯಿ ಮೌಲ್ಯ ಕುಸಿತ: ಮೋದಿ ಹಳೆಯ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

0
1948

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, 11: ಆರ್ಥಿಕ ಬಿಕ್ಕಟ್ಟು ಮತ್ತು ರೂಪಾಯಿ ಮೌಲ್ಯ ಕುಸಿತದ ಕುರಿತು ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯ ಹಳೆಯ ಭಾಷಣ ಭೂಮರಾಂಗ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮರಳಿದೆ. ನರೇಂದ್ರ ಮೋದಿ ಅವರ ಅಧಿಕೃತ ಯುಟ್ಯೂಬ್ ಖಾತೆಯಲ್ಲಿ 2012ರಲ್ಲಿ ಈ ವೀಡಿಯೊ ಪೋಸ್ಟ್ ಆಗಿತ್ತು.

ಡಾಲರ್ ದೊಡ್ಡದಾಗುವಾಗ ರೂಪಾಯಿ ಸಣ್ಣದಾಗುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ವಿಶ್ವ ವ್ಯಾಪಾರ ಕ್ಷೇತ್ರದಲ್ಲಿ ಭಾರತ ಇರುವುದಿಲ್ಲ. ನೇಪಾಲ್ ಮತ್ತು ಶ್ರೀಲಂಕಾ ಪಾಕಿಸ್ತಾನ, ಬಾಂಗ್ಲದೇಶಗಳ ಕರೆನ್ಸಿಗೆ ತೊಂದರೆಯಾಗಿಲ್ಲ. ನಮ್ಮ ದೇಶದ ಕರೆನ್ಸಿ ಮೌಲ್ಯ ಮಾತ್ರ ಕುಸಿತವಾಗಿದೆ. ಇದಕ್ಕೆ ಪ್ರಧಾನಿ ಉತ್ತರ ನೀಡಬೇಕು. ಕುಸಿತ ಸುಮ್ಮನೆ ಆಗಿದ್ದಲ್ಲ. ದಿಲ್ಲಿಯಲ್ಲಿ ಆಡಳಿತ ನಡೆಸುವವರ ಭ್ರಷ್ಟಾಚಾರಿ ಸರಕಾರ ಅದನ್ನು ಉಂಟು ಮಾಡಿದೆ ಎಂದು ಮೋದಿ ಹೇಳಿದ್ದರು.

ಮೋದಿ ಭಾಷಣ ಮಾಡಿದ್ದ 2012ರಲ್ಲಿ ಡಾಲರ್ ಮುಂದೆ ರೂಪಾಯಿಯ ವಿನಿಮಯ ಮೌಲ್ಯ 53.44 ಆಗಿತ್ತು. ಈಗ ದರ 73.81ರೂಪಾಯಿಯಾಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಡಾಲರ್ ವಿನಿಮಯದಲ್ಲಿ ರೂಪಾಯಿಯ ದಾಖಲೆ ಕುಸಿತ ಆಗಿದೆ. ಇದಾದ ನಂತರ ಮೋದಿಯ ಹಳೆಯ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

രൂപയുടെ വിലയിടിവ്​; മോദിയുടെ പഴയ പ്രസംഗം വൈറലാകുന്നു

രൂപയുടെ വിലയിടിവ്​; മൻമോഹൻ സിങ്​ ഉത്തരം പറയണം. 2012ൽ മോദി പറഞ്ഞതിങ്ങനെ. സമൂഹമാധ്യമങ്ങളിൽ പ്രചരിക്കുന്ന വീഡിയോ

Posted by Madhyamam on Tuesday, March 10, 2020