ಕೆನಡ ಪ್ರಧಾನಿಯ ಪತ್ನಿಗೆ ಕೊರೊನಾ: ಐಸೊಲೇಶನ್ ಗೆ ಶಿಫ್ಟ್

0
582

ಸನ್ಮಾರ್ಗ ವಾರ್ತೆ

ಒಟ್ಟಾವ, ಮಾ.13: ಕೆನಡದ ಪ್ರಧಾನಿ ಟ್ರುಡೊರ ಪತ್ನಿ ಸೋಫಿ ಗ್ರಿಗರಿ ಟ್ರುಡೊರಿಗೆ ಕೊರೊನಾ ಇದೆ ಎಂದು ದೃಢಪಟ್ಟಿರುವುದನ್ನು ಪ್ರಧಾನಮಂತ್ರಿಯ ಕಚೇರಿ ತಿಳಿಸಿದೆ. ಈಗ ಸೋಫಿ ಐಸೊಲೇಶನ್‍ನಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೋಫಿ ಆರೋಗ್ಯ ತೃಪ್ತಿಕರವಾಗಿದೆ. ಆರೋಗ್ಯ ಸಚಿವಾಲಯ ಮುನ್ನೆಚ್ಚರಿಕೆ ವಹಿಸಿದೆ. ಪ್ರಧಾನಿ ಟ್ರುಡೊಗೆ ಕೊರೊನ ಬಂದಿಲ್ಲ. ಆದರೆ ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಅವರೂ ಐಸೊಲೇಶನ್ ಲ್ಲಿರುತ್ತಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಟ್ರುಡೊರ ಪತ್ನಿ ಸೋಫಿ ಗ್ರಿಗರಿ ಲಂಡನ್‍ನಿಂದ ಬಂದ ಮೇಲೆ ಸಣ್ಣದಾಗಿ ಜ್ವರ ಬಂತು. ಕೂಡಲೇ ಟ್ರುಡೊ ಪತ್ನಿಯನ್ನು ಸಾರ್ವಜನಿಕ ಸಂಪರ್ಕದಿಂದ ದೂರವಿರಿಸಿ ಗಂಟಲಿನ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು.