ಯೆಸ್‍ ಬ್ಯಾಂಕ್: ಅನಿಲ್ ಅಂಬಾನಿಗೂ ಇಡಿ ಉರುಳು

0
870

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.16: ಯೆಸ್‍ ಬ್ಯಾಂಕ್ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅಂಬಾನಿಯೂ ವಿಚಾರಣೆಗೆ ಹಾಜರಾಗಬೇಕೆಂದು ಎಂಪೋರ್ಸ್ ಮೆಂಟ್ ಡೈರಕ್ಟರೇಟ್ ಸಮನ್ಸ್ ಕಳುಹಿಸಿದೆ. ಮುಂಬೈಯಲ್ಲಿ ತನಿಖಾ ಅಧಿಕಾರಿಯ ಮುಂದೆ ಅವರು ಹಾಜರಾಗಬೇಕಾಗಿದೆ. ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಮೊರೊಟರಿಯಂ ಘೋಷಿಸಿದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿಯ ಅಧೀನದ ಸಂಸ್ಥೆಗಳು ಸಾಲ ತೆಗೆದು ಮರುಪಾವತಿಯಲ್ಲಿ ಲೋಪ ಎಸಗಿತ್ತು. ಇದನ್ನು ಇಡಿ ತನಿಖೆಗೆ ಗುರಿಪಡಿಸಲಿದೆ. ಇದೇ ವೇಳೆ ಆರೋಗ್ಯ ಸಮಸ್ಯೆ ತೋರಿಸಿ ತನಗೆ ಹಾಜರಾಗಲು ಹೆಚ್ಚು ಸಮಯ ಕೊಡಿ ಎಂದು ಅನಿಲ್ ಅಂಬಾನಿ ಆಗ್ರಹಿಸಿದ್ದಾರೆಂದು ಸೂಚನೆಯಿದೆ. ರಿಲಯನ್ಸ್ ಗ್ರೂಪ್ ಮತ್ತು ಉನ್ನತ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು. ಯೆಸ್ ಬ್ಯಾಂಕ್ ನೇತೃತ್ವದಲ್ಲಿ ರಿಲಯನ್ಸ್ ಗ್ರೂಪ್ ಪಡೆದ ಸಾಲದ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಅದು ಪೂರ್ಣವಾಗಿ ಸುರಕ್ಷಿತವಾದುದು ಎಂದು ಅನಿಲ್ ಅಂಬಾನಿ ಕಳೆದ ದಿವಸ ಹೇಳಿದ್ದರು.

ಯೆಸ್ ಬ್ಯಾಂಕ್‍ ಮಾಜಿ ಸಿಇಒ ರಾಣಾ ಕಪೂರ್, ಪತ್ನಿ ಅವರ ಹೆಣ್ಣುಮಕ್ಕಳಿಗೂ ತಮಗೂ ಸಂಬಂಧ ಇಲ್ಲ ಎಂದು ಅನಿಲ್ ಅಂಬಾನಿ ಹೇಳಿದ್ದರು. ಅನಿಲ್‍ರ ಒಂಬತ್ತು ಸಂಸ್ಥೆಗಳು ಯೆಸ್‍ ಬ್ಯಾಂಕಿನಿಂದ 12,8000 ಕೋಟಿ ರೂಪಾಯಿ ಸಾಲ ಪಡೆದು ಉಳಿಸಿಕೊಂಡಿದೆ. ಹತ್ತು ಬೃಹತ್ ಬಿಸಿನೆಸ್ ಗ್ರೂಪ್‍ಗಳ 44 ಕಂಪೆನಿಗಳು ಯೆಸ್‍ ಬ್ಯಾಂಕಿನಿಂದ 34,000 ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದ್ದು ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಕಾರಣವಾಗಿದೆ. ಕಪ್ಪು ಹಣ ಬಿಳಿ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಯೆಸ್ ಬ್ಯಾ೦ಕ್ ಸಂಸ್ಥಾಪಕ ರಾಣಾ ಕಪೂರ್ ರನ್ನು ಕಳೆದ ವಾರು ಇಡಿ ಬಂಧಿಸಿತ್ತು.