ಜಾಗರೂಕತೆ ವಹಿಸಿದರೆ ಕೊರೊನಾಕ್ಕೆ ಹೆದರಬೇಕಾಗಿಲ್ಲ: ನೋಬೆಲ್ ವಿಜೇತ ವಿಜ್ಞಾನಿ- ಚೀನಾದ ಬಗ್ಗೆ ಅವರು ಹೇಳಿದ್ದ ಲೆಕ್ಕ ನಿಜವಾಗಿತ್ತು

0
1858

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಮಾ. 25: ಮಾನವರಿಗೆ ದೊಡ್ಡ ಆಘಾತ ಕೊಡುವಷ್ಟು ಕೊರೊನಾ ಭೀಕರ ವ್ಯಾಧಿಯಲ್ಲ ಎಂದು ನೊಬೆಲ್ ಪಾರಿತೋಷಕ ವಿಜೇತ ಮಿಶೆಲ್ ಲೆವಿಟ್ ಹೇಳಿದ್ದಾರೆ. ವಿಶ್ವ ಜನರನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಬಿಕ್ಕಟ್ಟಿಗೆ ದೂಡುವ ಸಾಧ್ಯತೆಯಿದೆ ಎಂಬ ಕೊರೊನದ ಕುರಿತ ಪ್ರಚಾರವನ್ನು ಅವರು ಅಲ್ಲಗೆಳೆದಿದ್ದಾರೆ.

ಮಿಶೆಲ್ ಲೆವಿಟ್ 2013ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪಡೆದಿದ್ದರು. ಚೀನ ಕೊರೊನಾ ಹರಡುತ್ತಿದ್ದಂತೆ ಲೆವಿಟ್ ಕೆಲವು ಭವಿಷ್ಯ ನುಡಿಯಾಡಿದ್ದರು. ಅದು ನಂತರ ನಿಜವಾಗಿತ್ತು. ಚೀನದಲ್ಲಿ 80000 ಜನರಿಗೆ ರೋಗ ತಗಲಬಹುದು ಮತ್ತು ಸಾವು 3250ಕ್ಕೆ ಸೀಮಿವಾಗಬಹುದು ಎಂದು ಅವರು ಹೇಳಿದ್ದರು. ಮಾರ್ಚ್ 16ರ ಲೆಕ್ಕ ಪ್ರಕಾರ 80298 ಜನರಿಗೆ ಚೀನದಲ್ಲಿ ಕೊರೊನಾ ದೃಢಪಟ್ಟಿದೆ. 3245 ಮಂದಿಯಸಾವನ್ನಪ್ಪಿದ್ದಾರೆ. 140 ಕೋಟಿ ಜನರಿರುವ ಚೀನದಲ್ಲಿ ಇದೊಂದು ಸಣ್ಣ ಸಂಖ್ಯೆ. ಮಾಧ್ಯಮಗಳೂ ಭೀತಿ ಹುಟ್ಟುಹಾಕುತ್ತಿವೆ ಎಂದು ಲೆವಿಟ್ ಹೇಳುತ್ತಾರೆ. ಕೊರೊನಾ ಪೀಡಿತ ದೇಶಗಳಲ್ಲಿ ವರದಿಯಾಗುವ ಹೊಸ ಲೆಕ್ಕ ತೆಗೆದು ನೋಡಿದರೆ ಚಿತ್ರಣ ಸ್ಪಷ್ಟವಾಗುತ್ತದೆ. ಮೊದಲ ಹಂತದಲ್ಲಿ ಕಂಡು ಬಂದ ರೋಗಿಗಳ ಸಂಖ್ಯೆ ನಂತರ ಕಡಿಮೆಯಾಗುವುದನ್ನು ನೋಡುತ್ತೇವೆ. ಸಾಮಾಜಿಕ ಸಂಪರ್ಕ ಕಡಿಮೆ ಮಾಡಿದರೆ ಹಠಾತ್ ಆಗಿ ಕೊರೊನಾ ವ್ಯಾಪಿಸದಂತೆ ತಡೆಯಬಹುದು. ದೇಹ ಉಷ್ಣಾಂಶ ಪರೀಕ್ಷೆಯನ್ನು ಹೆಚ್ಚು ನಡೆಸಬೇಕು. ಶಂಕಿರನ್ನು ನಿಗಾದಲ್ಲಿರಿಸಬೇಕು. ಹೀಗಾದರೆ ಕೊರೊನಾ ಹರಡದಂತೆ ತಡೆಯಬಹುದು. ಸಮಾಜದಲ್ಲಿ ವ್ಯಾಪಕವಾಗಿ ಭೀತಿ ಸೃಷ್ಟಿಸುವ, ಆರ್ಥಿಕ ಶಿಥಿಲಕ್ಕೆ ಮತ್ತು ಇತರ ಸಾಮಾಜಿಕ ಪ್ರತ್ಯಾಘಾತಗಳಿಗೆ ಇದು ಕಾರಣವಾಗುತ್ತಿದೆ.

ಮಾಧ್ಯಮಗಳು ಅನವಶ್ಯಕ ಹೆದರಿಕೆಯನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. ಕಳೆದ ಸೆಪ್ಟಂಬರ್ ನಲ್ಲಿ 3. 6 ಕೋಟಿ ಅಮೆರಿಕನ್ನರಿಗೆ ಫ್ಲೂ ಬಾಧಿಸಿತ್ತು. 22,000 ಜನರು ಮೃತಪಟ್ಟಿದ್ದರು. ಆದರೆ ಇದು ದೊಡ್ಡ ಪ್ರಚಾರದಲ್ಲಿರಲಿಲ್ಲ ಎಂದು ಲೆವಿಟ್ ಹೇಳಿದರು.

ಇದೇ ವೇಳೆ, ಲೆವಿಟ್ ಹೇಳಿದಂತೆ ಹೇಳಲು ಈಗ ಸಮಯ ಅಲ್ಲ. ಕೊರೊನಾ ಕುರಿತು ಹೆಚ್ಚು ವಿಷಯಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ ಎಂದು ಆರೋಗ್ಯ ಸಂಶೋಧಕ ಡಾ. ಲಾರನ್ ಮಿಲ್ಲರ್ ಹೇಳಿದರು.