ಕಾಸರಗೋಡಿಗರಿಗೆ ನಿರ್ಣಾಯಕ ದಿನ ಇಂದು- ಜಿಲ್ಲಾಧಿಕಾರಿ

0
885

ಸನ್ಮಾರ್ಗ ವಾರ್ತೆ

ಕಾಸರಗೋಡು, ಮಾ. 25: ಕಾಸರಗೋಡು ಜಿಲ್ಲೆಯಲ್ಲಿ ಕೊರೊನ ಶಂಕಿತ 77 ಮಂದಿಯ ಸ್ಯಾಂಪಲ್ ಅನ್ನು ಲ್ಯಾಬ್‍ಗೆ ಕಳುಹಿಸಿಕೊಡಲಾಗಿದ್ದು. ಅದರಲ್ಲಿ ಪಾಸಿಟಿವ್ ಆದವರ ಸಂಖ್ಯೆ ಇಂದು ಗೊತ್ತಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದ್ದರಿಂದ ಇಂದಿನ ದಿನ ಕಾಸರಗೋಡಿಗರಿಗೆ ತುಂಬ ನಿರ್ಣಾಯಕವಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ 45 ರೋಗಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಇವರಲ್ಲಿ ಕೊರೊನಾದ ಉದ್ಭವ ಕೇಂದ್ರ ಚೀನದ ವುಹಾನದಿಂದ ಬಂದ ವ್ಯಕ್ತಿ ನಾಲ್ಕು ಟೆಸ್ಟ್ ಗಳಲ್ಲಿ ನೆಗೆಟಿವ್ ಆಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮದಾಸ್ ಹೇಳಿದರು. ಇತರ 44 ಮಂದಿಗೆ ಈಗಲೂ ಕೊರೊನಾ ಇದೆ. ಅವರ ಮುಂದಿನ ಮೂರು ಟೆಸ್ಟ್ ಗಳು ನೆಗೆಟಿವ್ ಆದರೆ ಮಾತ್ರ ರೋಗಮುಕ್ತರೆಂದು ಹೇಳಬಹುದಾಗಿದೆ.

ರೋಗಲಕ್ಷಣ ಕಂಡು ಬಂದವರ ಒಂದು ಸ್ಯಾಂಪಲ್ ಪರೀಕ್ಷೆ ಫಲಿತಾಂಶ ನೆಗೆಟಿವ್ ಆದರೂ ಅವರು ಪೂರ್ಣರೋಗ ಮುಕ್ತರೆಂದು ಹೇಳಲಾಗುವುದಿಲ್ಲ. ಅವರು ಹದಿನಾಲ್ಕು ದಿವಸ ಕಡ್ಡಾಯವಾಗಿ ರೂಮ್ ಕ್ವರಟೈನ್‍ಗೆ ಹೋಗಬೇಕು. ಮುಂದಿನ ಪರೀಕ್ಷೆ ಫಲಿತಾಂಶ ನೆಗೆಟಿವ್ ಆದರೆ ಮಾತ್ರ ರೋಗಮುಕ್ತರಾದರು ಎಂದು ಹೇಳಲು ಸಾಧ್ಯ ಎಂದು ಜಿಲ್ಲಾ ವೈದ್ಯಾಧಿಕಾರಿ ಹೇಳಿದರು.