ಸನ್ಮಾರ್ಗ ವಾರ್ತೆ
ನವದೆಹಲಿ ಏಪ್ರಿಲ್ 15- ದೇಶದ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾದ ದೆಹಲಿಯ ನಿಜಾಮುದ್ದೀನ್ ಮರ್ಕಸ್ ಸಮ್ಮೇಳನವನ್ನು ಸಂಘಟಿಸಿದ ಆರೋಪದಲ್ಲಿ ತಬ್ಲೀಗಿ ಜಮಾಅತಿನ ನೇತಾರ ಮೌಲಾನ ಸಾದ್ ಅವರ ವಿರುದ್ಧ ಹತ್ಯೆಯಲ್ಲದ ಆದರೆ ದಂಡನೀಯ ಮಾನವ ಹತ್ಯೆ ಪ್ರಕರಣವನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಇವರ ನೇತೃತ್ವದಲ್ಲಿ ದೆಹಲಿಯಲ್ಲಿ ಧಾರ್ಮಿಕ ಸಮಾವೇಶ ನಡೆದಿತ್ತು.
ಆದರೆ, ಮೌಲಾನಾ ಕ್ವಾರಂಟೈನ್ ನಲ್ಲಿದ್ದು ತನಿಖೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಮೊದಲು ತನಿಖೆಗೆ ಹಾಜರಾಗುವಂತೆ ಪೊಲೀಸರು ನೋಟೀಸು ಜಾರಿಗೊಳಿಸಿದ್ದರು. ಇವರ ಜೊತೆಗೆ ಇನ್ನೂ 16 ಮಂದಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












