ಉತ್ತರ ಪ್ರದೇಶದ ಕೊರೊನಾ ತಪಾಸಣೆ ಕಳಪೆ- ಪ್ರಿಯಾಂಕಾ ಗಾಂಧಿ

0
973

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ.15: ಉತ್ತರಪ್ರದೇಶದಲ್ಲಿ ಕೊರೊನಾ ತಪಾಸಣೆ ವ್ಯವಸ್ಥೆ ಸರಿಯಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದರು. ಉತ್ತರಪ್ರದೇಶದಲ್ಲಿ ಕೊರೊನಾ ಪೀಡಿತರಾಗಿ ಮೃತಪಟ್ಟವರಲ್ಲಿ ಐವರ ರೋಗ ಪರೀಕ್ಷೆಯ ಫಲಿತಾಂಶ ಅವರು ಮೃತಪಟ್ಟ ನಂತರ ಬಂತು ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು. ರಾಜ್ಯದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚು ಮಾಡಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿಗೆ ತಾನು ಪತ್ರ ಬರೆದಿದ್ದೇನೆ ಎಂದೂ ಅವರು ತಿಳಿಸಿದರು.

ಉತ್ತರಪ್ರದೇಶದಲ್ಲಿ ವೈರಸ್ ಪರೀಕ್ಷೆಯ ವಿಧಾನ ತುಂಬ ಕಳಪೆಯಾಗಿದೆ. ಸಾಯುವ ಮೊದಲೇ ಪರೀಕ್ಷೆಯ ಫಲಿತಾಂಶ ಗೊತ್ತಾಗುವಂತಾಗಬೇಕು. ಶೀಘ್ರ ಮತ್ತು ಉತ್ಕೃಷ್ಟ ಮಟ್ಟದ ರೋಗ ತಪಾಸಣೆ ನಡೆಯಬೇಕು. ಹೆಚ್ಚು ಪರೀಕ್ಷೆಗಳನ್ನು ಮಾಡಿದರೆ ಮಾತ್ರ ಫಲಿತಾಂಶ ಸರಿಯಾಗಿ ಸಿಗಬಹುದು ಎಂದು ಪ್ರಿಯಾಂಕಾ ಹೇಳಿದರು.

ಎಪ್ರಿಲ್ 10ಕ್ಕೆ ಪ್ರಿಯಾಂಖಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕೊರೊನ ವಿರುದ್ಧ ಯುದ್ಧದಲ್ಲಿ ರಾಜಕೀಯ ಭಿನ್ನ ಅಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟುಗೂಡಿ ಹೋರಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.