80 ವರ್ಷದ ತಂದೆಯನ್ನು ಆಸ್ಪತ್ರೆಯಿಂದ ಹೊತ್ತುಕೊಂಡೇ ಮನೆಕಡೆ ಹೊರಟ ಮಗ: ಇದು ಲಾಕ್ ಡೌನ್ ಸಂಕಟ

0
3088

ಸನ್ಮಾರ್ಗ ವಾರ್ತೆ

ಕೊಲ್ಲಂ, ಏಪ್ರಿಲ್ 15- ಆಸ್ಪತ್ರೆಯಿಂದ ಬಿಡುಗಡೆಗೊಂಡ ವಯೋವೃದ್ಧ ತಂದೆಯನ್ನು ಆರು ಕಿಲೋಮೀಟರ್ ತನಕ ಮಗ ಹೊತ್ತುಕೊಂಡೇ ಹೋದ ಘಟನೆ ಕೇರಳದಲ್ಲಿ ನಡೆದಿದ್ದು, ಪೊಲೀಸರ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ತಂದೆಯನ್ನು ಮನೆಗೆ ಕರೆದುಕೊಂಡು ಹೋಗಲು ಕರೆತರಲಾದ ಆಟೋವನ್ನು ಪೊಲೀಸರು ತಡೆಹಿಡಿದ ಕಾರಣ ಮಗ ಹೀಗೆ ಹೊತ್ತುಕೊಂಡು ಹೋಗಿದ್ದಾನೆ.

80 ವರ್ಷದ ಜಾರ್ಜ್ ಅವರನ್ನು ಬುಧವಾರ ಮಧ್ಯಾಹ್ನ 12 ಗಂಟೆಗೆ ಪುಣಲೂರ್ ನಗರದ ತೂಗುಪಾಲಮ್ ಜಂಕ್ಷನ್ನಿನ್ನಲ್ಲಿ ಈ ಘಟನೆ ನಡೆದಿದೆ. ಪುಣಲೂರ್ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಾರ್ಜ್ ಅವರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು.

ತಂದೆಯನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ ಕುಲತ್ತುಪುರದಿಂದ ಆಟೋದೊಂದಿಗೆ ಮಗನು ಆಸ್ಪತ್ರೆಗೆ ಬಂದಿದ್ದಾನೆ. ಆದರೆ, ಪೊಲೀಸರು ಆಟೋವನ್ನು ತಡೆಹಿಡಿದರು. ತಂದೆಯನ್ನು ಕರೆದುಕೊಂಡು ಹೋಗಲು ನಾನು ಬಂದಿರುವೆನೆಂದು ಹೇಳಿದರೂ ಪೊಲೀಸರು ಕರುಣೆ ತೋರಲಿಲ್ಲ. ಬಳಿಕ ತನ್ನ ತಂದೆಯನ್ನು ತೋಳಲ್ಲಿ ಹೊತ್ತುಕೊಂಡು ಆರು ಕಿಲೋಮೀಟರ್ ನಡೆದು ಟಿಬಿ ಜಂಕ್ಷನ್ ಗೆ ತಲುಪಿದ ಆತ ಬಳಿಕ ತಂದೆಯನ್ನು ವಾಹನದಲ್ಲಿ ಕೊಂಡು ಹೋಗಿದ್ದಾನೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.