ವಿಶ್ವದಲ್ಲಿ 20 ಲಕ್ಷ ಕೊರೊನ ಪೀಡಿತರು: ಕಟ್ಟಿಹಾಕಲು ಸಾಧ್ಯವಾಗದೆ ನಿರಾಶೆಯಲ್ಲಿರುವ ಜಗತ್ತು

0
592

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಎ.15: ಜಗತ್ತಿನಲ್ಲಿ ಕೊರೊನಾ ಇರುವವರ ಸಂಖ್ಯೆ 20 ಲಕ್ಷವನ್ನು ದಾಟಿದೆ. 20,000,43 ಮಂದಿಗೆ ರೋಗ ದೃಢಪಟ್ಟಿದ್ದು ಇಷ್ಟು ಅಗಾಧ ಸಂಖ್ಯೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವಾಗಲೂ ಅದನ್ನು ತಡೆಯಲು ಆಗುತ್ತಿಲ್ಲ. ಇದು ವಿಶ್ವ ರಾಷ್ಟ್ರಗಳಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಬೇರೆ ಬೇರೆ ದೇಶಗಳಲ್ಲಿ ಮಹಾಮಾರಿಯಿಂದ ಮೃತರಾದ ಸಂಖ್ಯೆ ಒಂದು ಕಾಲು ಲಕ್ಷ ದಾಟಿದೆ.

ರೋಗಿಗಳ ಸಂಖ್ಯೆ, ಸಾವಿನ ಸಂಖ್ಯೆ ಅತೀ ಹೆಚ್ಚು ಅಮೆರಿಕದಲ್ಲಿ ವರದಿಯಾಗಿದೆ. ಅಮೆರಿಕದಲ್ಲಿ ರೋಗ ಪೀಡಿತರ ಸಂಖ್ಯೆ ಆರು ಲಕ್ಷ ದಾಟಿದೆ. ಮೃತಪಟ್ಟವರ ಸಂಖ್ಯೆ 20,000 ದಾಟಿದೆ. ಕಳೆದ 24 ಗಂಟೆಯಲ್ಲಿ 2000 ಕ್ಕೂ ಹೆಚ್ಚು ಮಂದಿ ಅಮೆರಿಕದಲ್ಲಿ ಮೃಪಟ್ಟಿದ್ದಾರೆ.

ಆಫ್ರಿಕದ ವಿವಿಧ ಕಡೆಗಳಿಂದ ಕೊರೊನಾ ವರದಿಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಘಟನೆಗಳ ಸಹಿತ ಆತಂಕದಲ್ಲಿವೆ. ಬಾಂಗ್ಲಾದೇಶ ಮತ್ತು ಆಫ್ರಿಕದ ದೇಶಗಳಲ್ಲಿ ರೋಗ ಹೆಚ್ಚುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಚೀನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೊಳಗಾಗಿದ್ದರೂ ಜನರು ಹಿಂದಿನಂತೆ ಬೀದಿಗಿಳಿದರೆ ರೋಗ ಹಬ್ಬುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.