ಸನ್ಮಾರ್ಗ ವಾರ್ತೆ
ಢಾಕ, ಎ. 16: ದಡ ಸೇರಲು ಸಾಧ್ಯವಾಗದೆ ಹಡಗಿನಲ್ಲಿ ಸಿಕ್ಕಿಹಾಕಿಕೊಂಡ ರೋಹಿಂಗ್ಯನ್ ನಿರಾಶ್ರಿತರಲ್ಲಿ ಹಸಿವಿನಿಂದ 28 ಮಂದಿ ಮೃತಪಟ್ಟಿದ್ದಾರೆ. 382 ಮಂದಿಯನ್ನು ಬಾಂಗ್ಲಾದೇಶದ ತಟರಕ್ಷಣಾ ಸೇನೆ ರಕ್ಷಿಸಿದೆ. ಕೊರೊನಾ ಹರಡುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಮಲೇಶ್ಯ ದಡಕ್ಕೆ ಬರಲು ಸಾಧ್ಯವಾಗದ ಕಾರಣ ಎರಡು ತಿಂಗಳು ಹಡಗಿನಲ್ಲಿ ಸಮುದ್ರದಲ್ಲಿ ಇವರು ಸಿಕ್ಕಿಹಾಕಿಕೊಂಡಿದ್ದರು.
382 ನಿರಾಶ್ರಿತರನ್ನು ಮ್ಯಾನ್ಮಾರ್ ಗೆ ವಾಪಸು ಕಳುಹಿಸಲು ಸರಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದಾರೆ. ಇವರು ಬಾಂಗ್ಲಾದೇಶದಿಂದ ಹೋಗಿದ್ದರೇ ಅಥವಾ ಮ್ಯಾನ್ಮಾರಿನಿಂದ ಹೊರಟು ಬಂದಿದ್ದರೇ ಎಂಬುದು ಸ್ಪಷ್ಟವಾಗಿಲ್ಲ. ಇವರನ್ನು ಈಗ ತೆಕ್ನಾಫ್ ಸಮೀಪದ ಸಮುದ್ರ ತೀರಕ್ಕೆ ಕರೆತರಲಾಗಿದೆ. ಇವರಲ್ಲಿ ಕೊರೊನಾ ಪೀಡಿತರು ಇದ್ದಾರೆಯೇ ಎಂಬ ಸಂದೇಹದಲ್ಲಿ ಇವರನ್ನು ಪ್ರಶ್ನಿಸಲು ಸಾಧ್ಯವಾಗಿಲ್ಲ ಎಂದು ಬಾಂಗ್ಲಾ ತಟ ರಕ್ಷಣಾ ಸೇನೆ ಲೆಪ್ಟಿನೆಂಟ್ ಶಾ ಝಿಯ ರಹ್ಮಾನ್ ಹೇಳಿದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












