ಭೋಪಾಲ ಅನಿಲ ದುರಂತದಲ್ಲಿ ಬದುಕುಳಿದಿದ್ದ 5 ಮಂದಿ ಕೊರನಾಕ್ಕೆ ಬಲಿ

0
702

ಸನ್ಮಾರ್ಗ ವಾರ್ತೆ

ಭೋಪಾಲ, ಎ. 16: ಲೋಕವೇ ಬೆಚ್ಚಿಬಿದ್ದ ಭೋಪಾಲ ಅನಿಲ ದುರಂತದಲ್ಲಿ ಬದುಕಿ ಉಳಿದು ನಿತ್ಯ ರೋಗಿಗಳಾಗಿದ್ದ ಐದು ಮಂದಿ ಕೊರನಾಕ್ಕೆ ಬಲಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಸರಕಾರಿ ವ್ಯವಸ್ಥೆಯ ನಿರ್ಲಕ್ಷ್ಯತನಗಳು ಇವರ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಅನಿಲ ದುರಂತದ ಬಲಿಪಶುಗಳಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಸಾಮಾಜಿಕ ಕಾರ್ಯಕರ್ತರು ಮಧ್ಯಪ್ರದೇಶ ಸರಕಾರವನ್ನು ಎಚ್ಚರಿಸಿದ್ದರು. ಇವರನ್ನು ಚಿಕಿತ್ಸೆ ಮಾಡುವ ಭೋಪಾಲ ಮೆಮೊರಿಯಲ್ ಆಸ್ಪತ್ರೆಯನ್ನು ಕೊರೊನಾ ರೋಗಿಗಳಿಗೆ ಮೀಸಲಿಡಲಾಯಿತು. ಇದು ಐದು ಮಂದಿಯ ಜೀವಕ್ಕೆ ಕುತ್ತಾಯಿತು ಎಂದು ಭೋಪಾಲ್ ಗ್ರೂಫ್ ಫಾರ್ ಇನ್ಫಾರ್ಮೆಶನ್ ಆಂಡ್ ಆಕ್ಷನ್ ಕಾರ್ಯಕರ್ತ ರಚನಾ ದಿಂಗ್ರ ಹೇಳಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಎಪ್ರಿಲ್ ಐದರಂದು 55 ವರ್ಷದ ವ್ಯಕ್ತಿ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಇವರು ಆರೋಪಿಸಿದ್ದಾರೆ. ಬಿಎಚ್‍ಇಎಲ್‍ನ ನಿವೃತ್ತ ಉದ್ಯೋಗಿಯೂ ಮೃತಪಟ್ಟಿದ್ದಾರೆ. ಇವರಿಗೆ ಅಗತ್ಯ ಚಿಕಿತ್ಸೆ ದೊರೆಯದ್ದು ಕಾರಣವಾಗಿದೆ. ಇವರಿಗೆ 80 ವರ್ಷ ವಯಸ್ಸಾಗಿತ್ತು. ಇನ್ನೋರ್ವ 75 ವರ್ಷದ ಹಿರಿಯ ಪತ್ರಕರ್ತರ ಸಹಿತ ಕೊರೊನಾ ಸೋಂಕಿನಿಂದ ಇಲ್ಲಿ ಮೃತಪಟ್ಟಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.