ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ.16: ದೇಶದಲ್ಲಿ ಈವರೆಗೆ 422 ಮಂದಿ ಮೃತಪಟ್ಟಿದ್ದು 12,770ಕ್ಕೂ ಹೆಚ್ಚು ಕೊರೊನಾ ಪೀಡಿತರಿದ್ದಾರೆ. ದಿಲ್ಲಿಯಲ್ಲಿ ಒಬ್ಬ ವೈದ್ಯರು ಮೃತಪತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ 10,440 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇವೇಳೆ 1508 ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 2,916 ಮಂದಿ ವೈರಸ್ ಪೀಡಿತರಿದ್ದು 187 ಮಂದಿ ಜೀವ ಕಳಕೊಂಡರು. ದಿಲ್ಲಿಯಲ್ಲಿ ರೋಗಿಗಳ ಸಂಖ್ಯೆ 1,578ಕ್ಕೇರಿಕೆಯಾಗಿದ್ದು 32 ಮಂದಿ ಮೃತಪಟ್ಟಿದ್ದಾರೆ. ತಮಿಳ್ನಾಡಿನಲ್ಲಿ 14 ಮಂದಿ ಕೊರೊನದಿಂದ ಸಾವೀಗೀಡಾಗಿದ್ದು ಇಲ್ಲಿ 1,242 ಮಂದಿಗೆ ರೋಗ ತಗಲಿದೆ.
ರೋಗ ಹರಡದಂತೆ ತಡೆಯಲು ತಮಿಳ್ನಾಡು, ದಿಲ್ಲಿ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಸಾಧ್ಯವಾಗಿಲ್ಲ. ಮಧ್ಯಪ್ರದೇಶದಲ್ಲಿ 938 ಮಂದಿಗೆ ರೋಗ ದೃಢವಾಗಿದ್ದು, 53 ಮಂದಿ ಸಾವಿಗೆ ತುತ್ತಾಗಿದ್ದಾರೆ. ಗುಜರಾತಿನಲ್ಲಿ ರೋಗಿಗಳ ಸಂಖ್ಯೆ 766ಕ್ಕೇರಿದ್ದು 33 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ 11 ಮತ್ತು ತೆಲಂಗಾಣದಲ್ಲಿ 18 ಮತ್ತು ಆಂಧ್ರಪ್ರದೇಶದಲ್ಲಿ 14 ಮಂದಿ ಮೃತಪಟ್ಟಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












