ಕಾಫಿ ನಾಡಲ್ಲಿ ಕಂಗಾಲಾದವರ ಕೈ ಹಿಡಿದ ಎಚ್ ಆರ್ ಎಸ್: ಮನೆ ಮನೆ ತೆರಳಿ ಆಹಾರ ಪೊಟ್ಟಣ ವಿತರಣೆ

0
928

ಸನ್ಮಾರ್ಗ ವಾರ್ತೆ

ಮಡಿಕೇರಿ, ಏಪ್ರಿಲ್ 16- ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಕೊಡಗು ಹುಮಾನಿಟಟೇರಿಯನ್ ರಿಲೀಫ್ ಸೊಸೈಟಿಯು (ಎಚ್ ಆರ್ ಎಸ್) ಧಾವಿಸಿದ್ದು ಸುಮಾರು 2000 ಆಹಾರದ ಪೊಟ್ಟಣಗಳನ್ನು ಕಳೆದ ಹದಿನೈದು ದಿನಗಳಲ್ಲಿ ಅರ್ಹ ವ್ಯಕ್ತಿಗಳಿಗೆ ವಿತರಿಸುವ ಮೂಲಕ ಜನರ ಗಮನ ಸೆಳೆದಿದೆ. ಕಾಫಿ ನಾಡಾದ ಕೊಡಗಿನಲ್ಲಿ ವಲಸೆ ಕಾರ್ಮಿಕರು, ದಿನಗೂಲಿಗಳು ಲಾಕ್ ಡೌನ್ ನಿಂದಾಗಿ ಅತಂತ್ರ ಸ್ಥಿತಿಗೆ ತಲುಪಿದ್ದು ಅವರಿಗೆ ಆಹಾರದ ಸಮಸ್ಯೆ ತಲೆದೋರಿದ್ದನ್ನು ಪರಿಗಣಿಸಿ ಎಚ್ ಆರ್ ಎಸ್ ಈ ಯೋಜನೆಯನ್ನು ಹಾಕಿಕೊಂಡಿತ್ತು.

ಪ್ರತಿದಿನ ನೂರರಿಂದ ಇನ್ನೂರರಷ್ಟು ಆಹಾರದ ಪೊಟ್ಟಣವನ್ನು ತಯಾರಿಸಿ ಅರ್ಹ ಬಡವರ ಮನೆ ಮನೆಯನ್ನು ಹುಡುಕಿ ಕೊಡುವುದಕ್ಕೂ ತೀರ್ಮಾನಿಸಲಾಯಿತು. ಮುಖ್ಯವಾಗಿ ಗಾರೆ ಕೆಲಸ ಮಾಡುವವರು, ಟೈಲ್ಸ್ ಕೆಲಸ ಮಾಡುವವರು, ಕೂಲಿ ಕೆಲಸ ಮಾಡುವವರು ಮತ್ತು ಕಾಫಿ ನಾಡಲ್ಲಿ ದುಡಿಯಲು ಬಂದ ವಲಸಿಗರು ಲಾಕ್ಡೌನ್ ನಿಂದಾಗಿ ಅತಂತ್ರರಾಗಿದ್ದರು. ಊರಿಗೆ ಹೋಗುವುದಕ್ಕೂ ಸಾಧ್ಯವಾಗದೆ ಆಹಾರಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯವೂ ಇಲ್ಲದೇ ಕಷ್ಟದಲ್ಲಿ ಸಿಲುಕಿದ್ದಾಗ ಎಚ್ ಆರ್ ಎಸ್ ಅವರ ಕಷ್ಟಕ್ಕೆ ಮಿಡಿದಿದೆ.

ಬಿರಿಯಾನಿ ರೈಸ್, ವೆಜಿಟೇಬಲ್ ಮತ್ತು ಮೊಟ್ಟೆಯನ್ನೊಳಗೊಂಡ ಕಿಟ್ ಅನ್ನು ಧರ್ಮ ಬೇಧವಿಲ್ಲದೆ ಅರ್ಹ ಮನೆಗಳನ್ನು ಹುಡುಕಿ ಕೊಡುವ ಎಚ್ ಆರ್ ಎಸ್ ನ ಈ ತಂಡ ಪ್ರಯತ್ನವು ಜನರ ಪ್ರೀತಿಗೆ ಪಾತ್ರವಾಗಿದೆ. ದಾನಿಗಳು ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಎಚ್ ಆರ್ ಎಸ್ ನ ಆಫ್ಸರ್ ಅವರು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.