ಸನ್ಮಾರ್ಗ ವಾರ್ತೆ
ಕಂಗ್ರ, ಎ. 16: ಹಿಮಾಚಲ ಪ್ರದೇಶದಲ್ಲಿ ಪತ್ರಕರ್ತನಿಗೆ ಕೊರೊನಾ ವೈರಸ್ ತಗಲಿದೆ. ಇದನ್ನು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಗುರ್ದರ್ಶನ ಗುಪ್ತಾ ತಿಳಿಸಿದರು. ರಾಜ್ಯದಲ್ಲಿ 115 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಇವರಲ್ಲಿ 23 ಮಂದಿಯ ಫಲಿತಾಂಶ ನೆಗಟಿವ್ ಬಂದಿದೆ. ಇನ್ನೂ 92 ಮಂದಿಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಈವರೆಗೆ 33 ಮಂದಿಗೆ ವೈರಸ್ ತಗಲಿರುವುದು ದೃಢಪಟ್ಟಿದ್ದು ಒಬ್ಬರು ಮೃತಪಟ್ಟಿದ್ದಾರೆ. ಹದಿಮೂರು ಮಂದಿ ಗುಣಮುಖರಾಗುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಲಾಯ ತಿಳಿಸಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












