ಸನ್ಮಾರ್ಗ ವಾರ್ತೆ
ಟೆಲ್ ಅವಿವ್, ಎ.17: ಕೊರೊನಾ ವ್ಯಾಪಿಸದಂತೆ ಜಾರಿಗೆ ತಂದ ಲಾಕ್ಡೌನ್ ವಿರುದ್ಧ ಇಸ್ರೇಲಿನ ಜನ ತಿರುಗಿಬಿದ್ದಿದ್ದಾರೆ. ತೀವ್ರ ಮೂಲಭೂತ ವಿಶ್ವಾಸಿಗಳಾದ ಹರೇದಿ ವಿಭಾಗದ ಯಹೂದಿಗಳು ಲಾಕ್ಡೌನ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು ಇವರ ವಿರುದ್ಧ ಪೊಲೀಸರು ಗ್ರೆನೆಡ್ ಪ್ರಯೋಗಿಸಿದರು. ಹಲವಾರು ಮಂದಿ ಗಾಯಗೊಂಡಿದ್ದಾರೆ. ಹಲವು ಕಡೆ ಉದ್ವಿಗ್ನ ಸ್ಥಿತಿ ನೆಲೆಸಿದೆ ಎಂದು ಇಸ್ರೇಲಿನ ಮಾಧ್ಯಮಗಳು ವರದಿ ಮಾಡಿವೆ..
ಗುರುವಾರ ರಾತ್ರೆ ಜೆರುಸಲೇಮ್ನ ಮಿಯ ಶಿರೀಂ ಪ್ರದೇಶದಲ್ಲಿ ಪ್ರತಿಭಟನೆ ಆರಂಭವಾಯಿತು. ಆರೋಗ್ಯ ಸಚಿವ ಯಾಕೋವ್ ಲಿಸ್ಸಮನ್ ಗುರುವಾರ ಲಾಕ್ಡೌನ್ ಘೊಷಣೆ ಮಾಡಿದ್ದರು. ಆದರೆ ನಮ್ಮ ಸ್ಥಳಗಳಲ್ಲಿ ಕಠಿಣ ನಿಯಂತ್ರಣ ಹೇರಲಾಗಿದೆ ಎಂದು ಅಪಾದಿಸಿ ಹರೇದಿ ವಿಭಾಗದ ಧಾರ್ಮಿಕ ನಾಯಕರ ಕರೆಯಂತೆ ಜನರು ಬೀದಿಗಿಳಿದರು.
ಈ ಹಿಂದೆ ಲಾಕ್ ಡೌನ್ ಜಾರಿಗೊಳಿಸುವ ವಿಚಾರದಲ್ಲಿ ಚರ್ಚೆ ನಡೆದಿತ್ತು. ಲಾಕ್ ಡೌನನನ್ನು ಹರೇದಿ ವಿಭಾಗದ ಪ್ರತಿನಿಧಿಗಳು ಕಟುವಾಗಿ ವಿರೋಧಿಸಿದ್ದರು. ಅವರನ್ನು ಲೆಕ್ಕಿಸದೆ ಸರಕಾರ ಲಾಕ್ ಡೌನ್ ತಂದಿತ್ತು.
ಓದುಗರೇ, sanmaraga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












