ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 17: ತಬ್ಲೀಗ್ ಜಮಾಅತ್ ನಾಯಕನ ವಿರುದ್ಧ ಇ. ಡಿ. ಯು (ಜಾರಿ ನಿರ್ದೇಶನಾಲಯ) ಕಪ್ಪುಹಣ ಬಿಳಿ ಮಾಡಿದ ಪ್ರಕರಣ ದಾಖಲಿಸಿಕೊಂಡಿದೆ. ಮೌಲಾನ ಮುಹಮ್ಮದ್ ಅಸದ್ ಕಾಂದಲವಿಯ ವಿರುದ್ಧ ಜಾರಿ ನಿರ್ದೇಶನಾಲಯ ಕೇಸು ಹಾಕಿದೆ. ಮೌಲಾನಾ ಸಅದ್ ಮತ್ತು ತಬ್ಲೀಗ್ ಜಮಾಅತ್ ನೊಂದಿಗೆ ಸಂಬಂಧವಿರುವ ಟ್ರಸ್ಟ್ ವಿರುದ್ಧ ಇನ್ಫೋರ್ಮೇಶನ್ ರಿಪೋಟ್ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಕಳೆದ ಕೆಲವು ತಿಂಗಳಿನಿಂದ ತಬ್ಲೀಗ್ ಜಮಾಅತ್ ಸಂಘಟನೆ ಮತ್ತು ಅದರ ಪದಾಧಿಕಾರಿಗಳ ಹಣಕಾಸು ವ್ಯವಹಾರ ವಿದೇಶಿ ಫಂಡ್ ವಿವರಗಳನ್ನು ಇ ಡಿ ತನಿಖೆಗೆ ಗುರಿಮಾಡಿತ್ತು. ಬ್ಯಾಂಕುಗಳಿಂದ, ಗುಪ್ತಚರ ಏಜೆನ್ಸಿಗಳಿಂದ ಅನಧಿಕೃತ ವ್ಯವಹಾರಕ್ಕೆ ಸಂಬಂಧಿಸಿ ವಿವಿಧ ದಾಖಲೆಗಳು ಸಿಕ್ಕಿವೆ ಎಂದು ಇ ಡಿ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶ ಮತ್ತು ದೇಶದೊಳಗಿನ ಮೂಲಗಳಿಂದ ಸಂಘಟನೆಗೆ ಸಿಕ್ಕಿದ ಹಣದ ಕುರಿತು ಏಜೆನ್ಸಿಗಳು ಪರಿಶೀಲನೆ ನಡೆಸುತ್ತಿವೆ.
ನಿಝಾಮುದ್ದೀನ್ ಘಟನೆಯ ನಂತರ ಸ್ವಯಂ ಕೊರೊಂಟೈನ್ಗೆ ಹೋದ ಮೌಲಾನ ಸಅದ್ರಿಗೆ ಇ ಡಿ ಸಮನ್ಸ್ ಕಳುಹಿಸಿದೆ ಎಂದು ವರದಿಯಾಗಿದೆ. ಸೋಮವಾರ ಇವರ ಕೊರೊಂಟೈನ್ ಅವಧಿ ಮುಗಿಯುತ್ತಿದೆ. ನಂತರ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಇ ಡಿ ತಿಳಿಸಿದೆ. ನಿಝಾಮುದ್ದೀನ್ ಪೊಲೀಸ್ ಠಾಣೆಯ ಹೌಸ್ ಆಫೀಸರ್ ದೂರಿನಂತೆ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದುಗರೇ, sanmaraga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












