ಸನ್ಮಾರ್ಗ ವಾರ್ತೆ
ಗಾಂಧಿನಗರ, ಎ.19: ಲಾಕ್ಡೌನ್ಗೆ ಸಿಲುಕಿ ಮನೆಗೆ ಹೋಗಲು ಆಗದೆ ಖಿನ್ನತೆಯಿಂದ ಬಳಲಿದ ಯುವಕನೊಬ್ಬ ಮಂದಿರಕ್ಕೆ ತೆರಳಿ ನಾಲಗೆ ಕತ್ತರಿಸಿದ್ದಾನೆ. ಗುಜರಾತಿನಲ್ಲಿ ಕೆಲಸ ಮಾಡುತ್ತಿರುವ ಮಧ್ಯಪ್ರದೇಶದ ಯುವಕ ನಾಲಗೆಗೆ ಕತ್ತರಿ ಹಾಕಿದಾತ. ಗುಜರಾತಿನ ಬನಸ್ಕಾಂತದಲ್ಲಿ ಘಟನೆ ನಡೆದಿದ್ದು, ವಿವೇಕ್ಗೆ 24 ವರ್ಷ. ನಾಲಗೆ ಕತ್ತರಿಸಿಕೊಂಡು ರಕ್ತದಲ್ಲಿ ಮುಳುಗಿಹೋದ ಈತ ಪ್ರಜ್ಞೆ ಕಳಕೊಂಡು ಬಿದ್ದಿದ್ದ. ಕೈಯಲ್ಲಿ ಕತ್ತರಿಸಿದ ನಾಲಗೆಯ ತುಂಡಿತ್ತು. ಮೊದಲು ಈತನನ್ನು ಸ್ಥಳೀಯರು ನೋಡಿದ್ದರು.
ಲಾಕ್ಡೌನ್ ಘೋಷಣೆಯಾಗಿದ್ದರಿಂದ ಊರಿಗೆ ಹೋಗಲಾಗದೆ ಯುವಕ ವಿಷಾದ ರೋಗಕ್ಕೆ ಜಾರಿದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಕೊರೊನ ತಡೆಯಲು ತ್ಯಾಗ ಎಂದು ಈತ ನಾಲಗೆ ಕತ್ತರಿಸಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












