ಸನ್ಮಾರ್ಗ ವಾರ್ತೆ
ಕುಕ್ಕಿಲ, ಎಪ್ರಿಲ್ 22- ದೇಶವ್ಯಾಪಿ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ನಗರ ಕೇಂದ್ರಿತವಾಗಿ ನಡೆಯುವ ಸೇವಾ ಚಟುವಟಿಕೆಗಳಿಗೆ ಹೋಲಿಸಿದರೆ ಹಳ್ಳಿ ಮತ್ತು ಗ್ರಾಮೀಣ ಪ್ರದೇಶ ಕೇಂದ್ರಿತವಾಗಿ ಸೇವಾ ಚಟುವಟಿಕೆ ನಡೆಯುವುದು ಕಡಿಮೆ. ಪತ್ರಕರ್ತರೂ ಈ ಹಿಂದಿನಂತೆ ಹಳ್ಳಿ ಪ್ರದೇಶಗಳಿಗೆ ತಲುಪುವ ಅವಕಾಶಗಳು ಕ್ಷೀಣಿಸಿರುವ ಕಾರಣ ಹಳ್ಳಿಗಳು ಮಾಧ್ಯಮಗಳಲ್ಲಿ ಸುದ್ದಿಗೊಳಗಾಗುವ ಸಾಧ್ಯತೆಗಳೂ ಅಷ್ಟರ ಮಟ್ಟಿಗೆ ಕಡಿಮೆಯಾಗಿವೆ. ಇಂಥ ಹೊತ್ತಿನಲ್ಲಿ ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ಬದ್ರಿಯಾ
ಜುಮಾ ಮಸೀದಿಯು ತನ್ನ ಮಸೀದಿಗೊಳಪಟ್ಟ ಕುಟುಂಬಗಳ ಸಂಕಟಕ್ಕೆ ಧ್ವನಿಯಾಗಿದೆ.
ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ (BYA) ಮತ್ತು ಸಫಾ ಯೂತ್ ಫೆಡರೇಷನ್ (SYF) ಸಹಯೋಗದೊಂದಿಗೆ ಬದ್ರಿಯಾ ಜುಮಾ ಮಸೀದಿಯ ನೇತೃತ್ವದಲ್ಲಿ ಜಮಾಅತಿಗೊಳಪಟ್ಟ 41 ಮನೆಗಳಿಗೂ ಜೀವನಾವಶ್ಯಕ ವಸ್ತುಗಳುಳ್ಳ ಕಿಟ್ ಅನ್ನು ವಿತರಿಸಲಾಗಿದೆ.
ತಲಾ 1500 ರೂಪಾಯಿ ಮೊತ್ತದ ಅಕ್ಕಿ, ಸಕ್ಕರೆ, ಚಾ, ಮೆಣಸು ಸಹಿತ ಜೀವನಾವಶ್ಯಕ 15 ವಸ್ತುಗಳು ಪ್ರತಿ ಕಿಟ್ ನಲ್ಲಿವೆ. ಈ ಸಂದರ್ಭದಲ್ಲಿ ಮಸೀದಿಯ ಮಸೀದಿಯ ಇಮಾಮರು, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ, ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಶ್ರಫ್ ಟೈಲರ್, ಸಫಾ ಯೂತ್ ಫೆಡರೇಷನ್ ನ ಅಧ್ಯಕ್ಷ ಅಶ್ರಫ್ ಕೆ ಕೆ ಮುಂತಾದವರು ಉಪಸ್ಥಿತರಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












