ಸೂರ್ಯನ ಪ್ರಕಾಶವು ಕೊರೊನ ಹರಡುವಿಕೆಯನ್ನು ತಡೆಯಲಿದೆ: ಅಮೆರಿಕದ ವಿಜ್ಞಾನಿಗಳು

0
823

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಎ. 24: ಸೂರ್ಯನ ಪ್ರಕಾಶವು ಕೊರೊನಾ ಹರಡುವಿಕೆಯ ವೇಗವನ್ನು ಕಡಿಮೆಗೊಳಿಸಲಿದೆ ಎಂದು ಅಮೆರಿಕದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಇದರ ಮೇಲೆ ಹಚ್ಚಿನ ಸಂಶೋಧನೆಯೂ ನಡೆಯುತ್ತಿದ್ದು ಆದ್ದರಿಂದ ವರದಿಯನ್ನು ಬಹಿರಂಗಗೊಳಿಸಿಲ್ಲ. ಸೂರ್ಯನ ಪ್ರಕಾಶದ ಆಲ್ಟ್ರಾವಯಲೆಟ್ ಕಿರಣಗಳು ವೈರಸ್ ಮೇಲೆ ಪರಿಣಾಮ ಬೀರಲಿದ್ದು ವಾತಾವರಣದಲ್ಲಿ ಉಷ್ಣತೆ ಹೆಚ್ಚುವುದು ವೈರಸ್‍ಗೆ ಪ್ರತಿಕೂಲವಾಗಿ ಬಾಧಿಸಲಿದೆ. ವೈರಸ್‍ನ ಕೋಶದ ಅಲ್ಟ್ರಾವಯಲೆಟ್‍ನ ರೇಶಿಯೇಶನ್ ಹಾನಿ ಮಾಡುವುದು. ಇದರಿಂದ ಬೇಸಿಗೆಯಲ್ಲಿ ಕೊರೊನಾ ಹರಡುವಿಕೆಯ ತೀವ್ರತೆ ಕಡಿಮೆ ಎಂದು ಅಮೆರಿಕದ ಗೃಹ ಕಾರ್ಯದರ್ಶಿಯ ವೈಜ್ಞಾನಿಕ ಸಲಹೆಗಾರ ವಿಲಿಯಂ ಬ್ರಯಾನ್ ಪತ್ರಕರ್ತರಿಗೆ ತಿಳಿಸಿದರು.

ಆಲ್ಟ್ರಾ ವಯಲೆಟ್ ಕಿರಣಗಳಿಗೆ ವೈರಸ್ ಮುಕ್ತಗೊಳಿಸುವ ಶಕ್ತಿ ಇದೆ ಎಂದು ಈ ಹಿಂದೆ ಪತ್ತೆಯಾಗಿತ್ತು. ಉತ್ತರಾರ್ಧ ಗೋಳ ಇರುವ ಸೂರ್ಯ ಪ್ರಕಾಶ ಲಭಿಸುವ ಆಸ್ಟ್ರೇಲಿಯದಂತಹ ದೇಶದಲ್ಲಿ ಕೊರೊನಾದ ಪ್ರಭಾವ ಕಡಿಮೆ. ಇಲ್ಲಿ 700 ಮಂದಿಗೆ ಮಾತ್ರ ವೈರಸ್ ಇದೆ. 77 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.