ಕೇರಳದಲ್ಲಿ ನಾಲ್ಕು ತಿಂಗಳ ಮಗು ಕೊರೊನಕ್ಕೆ ಬಲಿ

0
552

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ, ಎ. 4: ಕೊರೊನಾ ಪೀಡಿತ ನಾಲ್ಕು ತಿಂಗಳ ಮಗು ಮೃತಪಟ್ಟಿದೆ. ಮಂಜೇರಿ ನಿವಾಸಿಯೊಬ್ಬರ ಮಗು ಚಿಕಿತ್ಸೆ ಪಡೆಯುವ ವೇಳೆ ಮೃತವಾಗಿದ್ದು ಮಗುವಿಗೆ ಎಲ್ಲಿಂದ ಕೊರೊನಾ ತಗಲಿದೆ ಎಂದು ಸ್ಪಷ್ಟವಾಗಿಲ್ಲ. ಹೃದಯಾಘಾತಕ್ಕೊಳಗಾಗಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಐಎಂಸಿಎಚ್ ಸೂಪರಿಡೆಂಟ್ ಡಾ. ಶ್ರೀಕುಮಾರ್ ಗುರುವಾರ ತಿಳಿಸಿದ್ದರು. ಕೊರೊನದಿಂದ ಹೃದಸ್ತಂಭನವಾಯಿತು. ಕೂಡಲೇ ಮಗುವನ್ನು ವೆಂಟಿಲೇಟರ್ ಗೆ ವರ್ಗಾಯಿಸಲಾಯಿತು.

ಗುರುವಾರ ಬೆಳೆಗೆ ಹೃದಯ ಸ್ತಂಭನವಾಯಿತು. ಮಗುವಿಗೆ ಮಾನಸಿಕ ಬೆಳವಣಿಗೆಯ ಕೊರತೆ ಇತ್ತು. ಜೊತೆಗೆ ಹೃದ್ರೋಗವೂ ಇದೆ ಎಂದು ಹೇಳಲಾಗಿತ್ತು. ಇದೇವೇಳೆ ಮಗುವಿಗೆ ಹೇಗೆ ಕೊರೊನವೈರಸ್ ತಗಲಿತು ಎಂದು ಈವರೆಗೆ ಸ್ಪಷ್ಟವಾಗಿಲ್ಲ. ಮಗುವಿನ ತಾಯಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿಲ್ಲ.

ಮಗುವಿಗೆ ಕೊರೊನಾ ದೃಢಪಟ್ಟದ್ದರಿಂದ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳನ್ನು ಸಹಿತ 47 ಮಂದಿ ಕೊರೊಂಟೈನ್‍ಗೊಳಪಡಿಸಲಾಗಿದೆ. ಹದಿನಾಲ್ಕು ಸಂಬಂಧಿಕರಲ್ಲಿ ಹನ್ನೊಂದು ಮಂದಿಯನ್ನು ಆಸ್ಪತ್ರೆಯಲ್ಲಿಯೂ ಮತ್ತು ಉಳಿದ ಮೂವರನ್ನು ಮನೆಯಲ್ಲಿಯೂ ನಿರೀಕ್ಷಣೆಗೆ ಒಳಪಡಿಸಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.