ಸನ್ಮಾರ್ಗ ವಾರ್ತೆ
ಭೋಪಾಲ, ಎ. 27: ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಮಧ್ಯಪ್ರದೇಶದಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡ ಆರೋಗ್ಯ ಸಚಿವ ನರೋತ್ತಂ ಮಿಶ್ರಾರಿಗೆ ಅವರ ಹುಟ್ಟೂರು ದಾತಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ. ಅವರ ಬೆಂಬಲಿಗರು, ಪತ್ರಕರ್ತರು ಸಚಿವರ ಸ್ವಾಗತಕ್ಕೆ ಅವರ ಮನೆಗೆ ಬಂದಿದ್ದಾರೆ. ಎಲ್ಲರೂ ಸಚಿವರ ಸುತ್ತಲೂ ನೆರೆದು ಅಭಿನಂದಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದ ಸೃಷ್ಟಿಸಿದೆ.
ಸಚಿವರಾಗಲಿ, ಕುಟುಂಬವಾಗಲಿ ಮಾಸ್ಕ್ ಧರಿಸಿಲ್ಲ, ಪರಸ್ಪರ ಅಂತರವನ್ನೂ ಪಾಲಿಸಿಲ್ಲ. ಕೇಂದ್ರ ಸರಕಾರ ಮಾಸ್ಕ್ ಹಾಕಲು ಕಡ್ಡಾಯಗೊಳಿಸುತ್ತಿದೆ. ಆದರೆ ಮಿಶ್ರಾರನ್ನ ಸ್ವಾಗತಿಸಲು ಬಂದ ಜನರು ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಆರೋಗ್ಯ ಸಚಿವರೇ ಕೊರೊನಾ ಪ್ರತಿರೋಧ ಮಾನದಂಡಗಳನ್ನು ಪಾಲಿಸದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ 2090 ಮಂದಿಗೆ ಕೊರೊನಾ ಇದೆ. 99 ಮಂದಿ ಮೃತಪಟ್ಟಿದ್ದಾರೆ.
@ChouhanShivraj got the Health minister after a month, but it seems the newly appointed @drnarottammisra forgets #Social_Distancing and wearing #facemaskholder on return to his home town Datia @INCMP @OfficeOfKNath @ndtvindia @ndtv #moblynching #COVID2019india #Covid_19 pic.twitter.com/BWhMeMRaG0
— Anurag Dwary (@Anurag_Dwary) April 26, 2020
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












