ಇಸ್ರೇಲಿಗರ ಭರವಸೆಯಾಗಿರುವ ಫೆಲೆಸ್ತೀನಿ ಖೈತಂ ಹುಸೈನ್: ಕೊರೋನಾ ಪೀಡಿತರ ಚಿಕಿತ್ಸೆಯಲ್ಲಿರುವ ಇವರು ಎರಡು ತಿಂಗಳಿಂದ ತಾಯಿಯನ್ನೂ ಭೇಟಿಯಾಗಿಲ್ಲ

0
787

ಸನ್ಮಾರ್ಗ ವಾರ್ತೆ

ಜೆರುಸಲೇಂ, ಎ. 28: ಇಸ್ರೇಲಿನಿಂದ ಮೂಲೋತ್ಪಾಟನೆಯಾಗಿರುವ ಫಲೆಸ್ತೀನಿನ ವೈದ್ಯೆ ಖೈತಂ ಹುಸೈನ್ ಕೊರೊನ ಕಾಲದಲ್ಲಿ ಇಸ್ರೇಲಿನ ರೋಗಿಗಳಿಗೆ ಭರವಸೆಯಾಗಿದ್ದಾರೆ. ಕಳೆದ ಫೆಬ್ರವರಿಯಿಂದ ಅವರು ಕರ್ತವ್ಯದಲ್ಲಿದ್ದಾರೆ. ಕೊರೊನ ವರದಿಯಾದಂದಿನಿಂದ ಹೈಫದ ಬಳಿಯ ರಂಬಾನ್ ಆಸ್ಪತ್ರೆಯಲ್ಲಿ ಹನ್ನೆರಡು ಗಂಟೆ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಎಂದಿನಂತೆ ಇಲ್ಲ ಕೆಲಸ. ನಮ್ಮ ಜೀವ ಕೂಡ ಅಪಾಯದಲ್ಲಿ. ಆದನ್ನು ಗಮನದಲ್ಲಿಟ್ಟು ಚಿಕಿತ್ಸೆ ಕೊಡಬೇಕು ಎಂದು ಅವರು ಎಎಫ್‍ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇಸ್ರೇಲಿನಲ್ಲಿ 15000ಕ್ಕೂ ಹೆಚ್ಚು ಕೊರೊನಾ ದೃಢಪಟ್ಟಿದೆ. 202 ಮಂದಿ ಮೃತಪಟ್ಟಿದ್ದಾರೆ. ರೋಗಿಗಳ ನೋವಿನ ಕ್ಷಣಗಳನ್ನು ಅವರು ವಿವರಿಸಿದರು. ರೋಗ ಬಿಗಡಾಯಿಸಿದಾಗ ವಯಸ್ಸಾದ ಇಸ್ರೇಲಿ ದಂಪತಿ ಆಸ್ಪತ್ರೆಗೆ ಬಂದರು. ಪತಿಯ ಅವಸ್ಥೆ ತೀರ ಗಂಭೀರ. ಅವರು ಸಾಯುವರು ಎಂದಾದಾಗ ಪತ್ನಿಯನ್ನು ನೋಡಲು ಬಿಟ್ಟೆವು. ಅವರ ಕೊನೆಯಾತ್ರೆಯ ಮಾತು ಯಾರನ್ನೂ ನೋಯಿಸೀತು.

1948ರಲ್ಲಿ ಫೆಲೆಸ್ತೀನ್‍ನಲ್ಲಿ ಜಾಗ ಕಿತ್ತುಕೊಂಡು ಇಸ್ರೇಲ್ ದೇಶ ಸ್ಥಾಪಿಸಿದ ಬಳಿಕ ಅಲ್ಲಿ ಉಳಿದಿದ್ದವರಲ್ಲಿ ವೈದ್ಯೆಯ ಪರಂಪರೆ ಇದೆ. ಇವರ ಒಟ್ಟು ಜನಸಂಖ್ಯೆ ಶೇ. 20ರಷ್ಟಿದ್ದಾರೆ. ಇವರಲ್ಲಿ ಮೆಡಿಕಲ್ ಪ್ರೊಫೆಸನಲ್ ಆಯ್ದುಕೊಂಡವರು ಬಹಳ ಕಡಿಮೆಯಿದ್ದಾರೆ. ಆಸ್ಪತ್ರೆಯಲ್ಲಿಯೂ ಫೆಲಸ್ತೀನಿಗಳು ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ವೈದ್ಯೆ ಹೇಳಿದರು.

ಒಂದು ರೋಗಿ ಮುಂದೆ ಬಂದಾಗ ನಾವು ಆತ ಯಹೂದಿಯೇ, ಫೆಲಸ್ತೀನಿಯೇ ಎಂದು ನೋಡಿ ಚಿಕಿತ್ಸೆ ನೋಡುವುದಿಲ್ಲ. ಕೊರೊನ ಹರಡುವ ಸಾಧ್ಯತೆ ಇರುವುದರಿಂದ ಎರಡು ತಿಂಗಳಿನಿಂದ ವಯಸ್ಸಾದ ಅಮ್ಮನನ್ನು ಕೂಡ ನೋಡಲಾಗಿಲ್ಲ. ಇವರ ಪತಿ ವಕೀಲ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.