ಸನ್ಮಾರ್ಗ ವಾರ್ತೆ
ಫಾರೊಕ್, ಎ. 28: ಆರು ವರ್ಷ ವಯಸ್ಸಿನ ಐಸಂ ಮುಹಮ್ಮದ್ ತಬಲಾ ವಾದನ ಮಾಡುತ್ತಿರುವುದು ತಮ್ಮ ಸ್ವಂತ ಜೀವವನ್ನು ಪಣವಾಗಿಟ್ಟು ಕರ್ತವ್ಯವದಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸುವುದಕ್ಕೆ. ಅವನು ಟಿವಿಯಲ್ಲಿ ಸರಕಾರ- ಆರೋಗ್ಯ-ಮತ್ತು ಸ್ವಯಂಸೇವಾ ಸಂಘಟನೆಯ ಕಾರ್ಯಕರ್ತರು ಮಹಾಮಾರಿ ಕೊರೊನ ವಿರುದ್ಧ ತೊಡಗಿಸಿಕೊಂಡಿರುವ ಕೆಲಸವಗಳನ್ನು ನೋಡುತ್ತಿದ್ದಾನೆ. ತಂದೆ ಪಾರಕ್ಕಲ್ ಅನಿಶಾಝ್ ರೊಂದಿಗೆ ಮುಖ್ಯಮಂತ್ರಿಯ ಪತ್ರಿಕಾಗೋಷ್ಠಿಯನ್ನು ಲೈವ್ ಆಗಿ ನೋಡುತ್ತಾನೆ. ಕೊರೊನಾ ಹೆದರಿಕೆಯಲ್ಲಿ ಶಾಲೆ ಬಂದ್ ಆಯಿತು. ಉರಿಗೇ ಊರೆ ಲಾಕ್ಡೌನ್ ಆಯಿತು. ನಂತರ ತನ್ನ ತಬಲವನ್ನು ಜಾಗೃತಿಯ ಮಾಧ್ಯಮವನ್ನಾಗಿ ಮಾಡಿದ್ದಾನೆ. ವಾಲಿಯರ್ ಕರದ ಮನೆಯಂಗಳದಲ್ಲಿ ಕೆಲವೊಮ್ಮೆ ಅಧ್ಯಾಪಕ ಮಾಸ್ಟರ್ ವಾಯ್ಸ್ ಯುಟ್ಯೂಬರ್ ಜಾಫರ್ ಮಾಸ್ಟರರೊಂದಿಗೆ ದೋಣಿಯಲ್ಲಿ ಕೂತು ತಬಲ ನುಡಿಸುತ್ತಾನೆ.
ಒಂದು ವರ್ಷದಿಂದ ತಬಲಾ ವಾದನದಲ್ಲಿ ಗಿನ್ನೆಸ್ ವಿಜೇತನಾದ ಸುಧೀರ್ ಕಟಲುಂಡಿಯವರ ಕೈಕೆಳಗೆ ಐಸಂ ಅಭ್ಯಸಿಸುತ್ತಿದ್ದಾನೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












