ಸನ್ಮಾರ್ಗ ವಾರ್ತೆ
ಕುಂದಾಪುರ ಎಪ್ರಿಲ್ 28- ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ಒಡ್ಡಿದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಬ್ಬರನ್ನು ಕುಂದಾಪುರದಲ್ಲಿ ಬಂಧಿಸಿರುವುದಾಗಿ ತಿಳಿದು ಬಂದಿದೆ. ಸಂದೀಪ ಮೇಸ್ತ ಮತ್ತು ಮಹೇಶ್ ಖಾರ್ವಿ ಬಂಧಿತರು. ಇವರಿಬ್ಬರು ಏಪ್ರಿಲ್ 2ರಂದು ಬೆಂಗಳೂರಿನಿಂದ ಊರಿಗೆ ಹಿಂದಿರುಗಿದ್ದರು. 28 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಎಂದು ಸಂದೀಪನಲ್ಲಿ ಆರೋಗ್ಯ ಅಧಿಕಾರಿಗಳು ಹೇಳಿದ್ದರು. ಆದರೆ ಕ್ವಾರಂಟೈನ್ ನಲ್ಲಿರದೆ ಹೊರಗೆ ಸುತ್ತಾಡಿಕೊಂಡಿರುವುದನ್ನು ಕಂಡು ಎಂಬ ಲಕ್ಷ್ಮಿ ಎಂಬ ಆಶಾ ಕಾರ್ಯಕರ್ತೆ ಆತನಿಗೆ ಎಚ್ಚರಿಕೆ ನೀಡಿದ್ದರು.
ಆ ಬಳಿಕ ಸಂದೀಪ್ ತಾನ್ನ ಗೆಳೆಯ ಮಹೇಶ್ ಖಾರ್ವಿ ಜೊತೆಸೇರಿ ಲಕ್ಷ್ಮಿಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿ ಕೇಸು ದಾಖಲಿಸಿದ್ದು ಇದೀಗ ಇಬ್ಬರನ್ನು ಬಂಧಿಸಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












