ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 28: ಸುಪ್ರೀಂಕೋರ್ಟಿನ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು ಆತನೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ರಿಜಿಸ್ತ್ರಾರ್‍ರನ್ನು ಮುನ್ನೆಚ್ಚರಿಕೆಯ ಅಂಗವಾಗಿ ಮನೆಯಲ್ಲಿ ನಿರೀಕ್ಷಣೆಯಲ್ಲಿಡಲಾಗಿದೆ. ಸಿಬ್ಬಂದಿಗೆ ಕೊರೊನ ಇರುವುದು ಸೋಮವಾರ ದೃಢವಾಗಿತ್ತು.
ನ್ಯಾಯಾಂಗ ವಿಭಾಗದಲ್ಲಿ ಈತ ಎಪ್ರಿಲ್ 16ಕ್ಕೆ ಕೊನೆಯದಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಎಪ್ರಿಲ್ 16 ರ ನಂತರ ಈತ ಜ್ವರದಿಂದ ಬಳಲಿದ್ದಾನೆ. ನಂತರ ಸ್ಯಾಂಪಲ್ ಸಂಗ್ರಹಿಸಿ ಚೆಕ್‍ಅಪ್‍ಗೆ ಕಳುಹಿಸಲಾಯಿತು. ಈಗ ದಿಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈತನೊಂದಿಗೆ ಯಾರೆಲ್ಲ ನಿಕಟ ಸಂಬಂಧ ಇದ್ದವರು ಎಂಬುದನ್ನು ಕೂಡ ಗುರುತಿಸಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












