ಸನ್ಮಾರ್ಗ ವಾರ್ತೆ
ಲಂಡನ್, ಎ. 28: ಗಲಭೆ, ದುರಂತಗಳಿಂದಾಗಿ ವಿಶ್ವಾದ್ಯಂತ ಹುಟ್ಟೂರಿನಿಂದ ವಲಸೆ ಹೋಗುವಂತಾದವರ ಸಂಖ್ಯೆ 5 ಕೋಟಿ ಎಂದು ವರದಿಯಾಗಿದೆ. ಕೊರೊನಾ ಇಂತಹ ಜನರನ್ನು ಗಂಭೀರವಾಗಿ ಬಾಧಿಸಿದೆ ಎಂಬುದನ್ನು ಇಂಟರ್ನ್ಯಾಶನಲ್ ಡಿಸ್ಪ್ಲೇಸ್ಮೆಂಟ್ ಮಾನಿಟರಿಂಗ್ ಸೆಂಟರ್ (ಐಡಿಎಂಎಸ್) ಹೊರಡಿಸಿದ ಲೆಕ್ಕಗಳು ಬಹಿರಂಗಪಡಿಸಿದೆ. ಘರ್ಷಣೆಯಿಂದ ಮನೆಯಿಂದ ಹೊರದಬ್ಬಲ್ಪಟ್ಟವರು 4.5 ಕೋಟಿ ಜನರು. ಇವರು ಮನೆಯಿಂದ ಪಲಾಯನ ಮಾಡುವುದು ಅನಿವಾರ್ಯವಾಗಿತ್ತು. ಉಳಿದ 50 ಲಕ್ಷ ಜನರು ಭೂಕಂಪನ, ನೆರೆ ಬರದಂತಹ ಪ್ರಾಕೃತಿಕ ದುರಂತದಿಂದ ಮನೆಮಠ ಕಳಕೊಂಡವರು .
2019ರಲ್ಲಿ ಮನೆ ಮಠ ಕಳಕೊಂಡವರ ಸಂಖ್ಯೆ ಮೂರು ಕೋಟಿಯಾಗಿತ್ತು. ಯಾವಾಗಲೂ ಅಸುರಕ್ಷಿತತೆ. ಶಿಬಿರದಲ್ಲಿರುವ ಇವರಿಗೆ ಕೊರೋನಾ ಬೆದರಿಕೆಯಾಗಿದೆ. ಶಿಬಿರದಲ್ಲಿ ಜನಜಂಗುಳಿ ಇದೆ. ಸಾಮಾಜಿಕ ಅಂತರ ಪಾಲಿಸುವುದನ್ನು ಜಾರಿಗೆ ತರುವುದು ಕೂಡ ಸುಲಭವಲ್ಲ. ಅಂತಾರಾಷ್ಟ್ರೀಯ ಮಾನವೀಯ ಸಹಾಯ ಕೂಡ ಸ್ಥಗಿತವಾಗಿರುವ ರೀತಿಯಲ್ಲಿದೆ ಎಂದು ಐಡಿಎಂಸಿ ಮುಖ್ಯಸ್ಥ ಅಲಕ್ಸಾಂಡರ್ ಬಿಲಾಕ್ ಹೇಳಿದರು. ಸಿರಿಯ, ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಯಮನ್, ಅಫ್ಘಾನಿಸ್ತಾನ ಮೊದಲಾದ ದೇಶದ ಪ್ರಜೆಗಳು ಮನೆ ಕಳಕೊಂಡು ನಿರಾಶ್ರಿತರಾಗಿದ್ದಾರೆ. ಈ ದೇಶಗಳಲ್ಲಿ ನಡೆಯುವ ಆಂತರಿಕ ಯುದ್ಧ ನಿಲ್ಲಿಸುವ ಪರಿಸ್ಥಿತಿ ಬಂದರೆ ಮಾತ್ರ ನಿರಾಶ್ರಿತರ ಹರಿವನ್ನು ತಡೆದು ನಿಲ್ಲಿಸಲು ಸಾಧ್ಯವಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












