ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಏನೆಲ್ಲಾ ವ್ಯವಸ್ಥೆ ಇದೆ ತಿಳಿದಿದ್ದೀರಾ?

0
878

ವೀಡಿಯೋ ಬಿಡುಗಡೆ ಮಾಡಿದ ದ.ಕ. ಜಿಲ್ಲಾಡಳಿತ

ಸನ್ಮಾರ್ಗ ವಾರ್ತೆ

ಮಂಗಳೂರು,ಮೇ.8: ವಿಶ್ವಾದ್ಯಂತ ಹರಡಿರುವ ಕೋವಿಡ್ – 19 (ಕೊರೋನಾ ವೈರಸ್)ನ್ನು ನಿಯಂತ್ರಿಸುವ ಸಲುವಾಗಿ ದ.ಕ. ಜಿಲ್ಲಾಡಳಿತವು ವೆ ಲಾಕ್ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದ್ದು, ಕೊರೋನಾ ಸೋಂಕಿತರಿಗಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್ ಆಸ್ಪತ್ರೆಯ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆಸ್ಪತ್ರೆಯಲ್ಲಿರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಬಿತ್ತರಿಸಿದೆ. ಈ ವೀಡಿಯೋದಲ್ಲಿ ವೆನ್ ಲಾಕ್ ಜಿಲ್ಲಾ ಅಧೀಕ್ಷಕ ಹಾಗೂ ಶಸ್ತ್ರಚಿಕಿತ್ಸಕರಾದ ಡಾ. ಸದಾಶಿವ ಶ್ಯಾನುಭಾಗ್ ಮಾಹಿತಿ ನೀಡಿದ್ದಾರೆ.

ವೆನ್ ಲಾಕ್ ಜಿಲ್ಲಾಸ್ಪತ್ರೆಯೊಂದಿಗೆ ದ.ಕ. ಜಿಲ್ಲೆಯ ಯೆನೆಪೋಯ ಮೆಡಿಕಲ್ ಕಾಲೇಜು, ಶ್ರೀನಿವಾಸ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜು, ಕೆಎಂಸಿ ಕಾಲೇಜು, ನಿಟ್ಟೆ ಕಾಲೇಜು, ಎ.ಜೆ. ಕಾಲೇಜು, ಕಣಚೂರು ಮೆಡಿಕಲ್ ಕಾಲೇಜು ಸೇರಿದಂತೆ ಒಟ್ಟು 8 ವೈದ್ಯಕೀಯ ಕಾಲೇಜುಗಳು ಕೈಜೋಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 28 ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ 13 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಚಿಕಿತ್ಸೆಯಲ್ಲಿದ್ದು, ಮೂವರು ಮೃತಪಟ್ಟಿದ್ದಾರೆ.
ಮೃತಪಟ್ಟವರಲ್ಲಿ ಮೂವರು ಕೂಡಾ ಮಹಿಳೆಯರಾಗಿದ್ದಾರೆ.

ಜಿಲ್ಲಾಡಳಿತ ಬಿಡುಗಡೆ ಮಾಡಿದ ಕೋವಿಡ್ ಆಸ್ಪತ್ರೆಯ ವೀಡಿಯೋ ನೋಡಿ.