ಅಲ್‍ ಅಕ್ಸಾದಲ್ಲಿ ಇಸ್ರೇಲಿನ ಹಸ್ತಕ್ಷೇಪ ಒಪ್ಪುವುದಿಲ್ಲ: ರಾಷಿದುಲ್ ಗನೂಷಿ

0
577

ಸನ್ಮಾರ್ಗ ವಾರ್ತೆ

ಟೂನಿಶ್, ಮೆ 9: ಜೆರುಸಲೇಂನ ಮಸ್ಚಿದುಲ್ ಅಕ್ಸಾದ ವಿರುದ್ಧ ಇಸ್ರೇಲಿನ ಅಧಿಕಾರಿಗಳು ಕೈಗೊಂಡ ಕ್ರಮಗಳನ್ನು ಟುನಿಷ್ಯನ್ ಪಾರ್ಲಿಮೆಂಟ್ ಸ್ಪೀಕರ್ ರಾಷಿದ್ ಅಲ್ ಗನೂಷಿ ತೀವ್ರವಾಗಿ ವಿರೊಧಿಸಿದ್ದು ಇಸ್ರೇಲ್ ಕ್ರಮವನ್ನು ಅಂಗೀಕರಿಸುವುದಿಲ್ಲ ಎಂದಿದ್ದಾರೆ. ರಾಷಿದುಲ್ ಗನೂಷಿಯವರು ಮಸ್ಚಿದುಲ್ ಅಕ್ಸಾದ ಇಮಾಮ್ ಶೇಖ್ ಇಕ್ರೀಮ್ ಸಬ್ರಿಯವರೊಂದಿಗೆ ಚರ್ಚಿಸಿದ ಬಳಿಕ ಟುನಿಷ್ಯದ ಅನ್ನಹ್ದ ಮೂವ್‍ಮೆಂಟ್ ಹೇಳಿಕೆಯನ್ನು ಹೊರಡಿಸಿದೆ.

ಜೆರುಸಲೇಂ ಮತ್ತು ಅಲ್ಲಿನ ಜನರಿಗೆ ಟುನಿಷ್ಯ ನೀಡುವ ಬೆಂಬಲವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಯಹೂದೀಕರಣದ ವಿರುದ್ಧ ಹಾಗೂ ಭೂಮಿ ಅತಿಕ್ರಮಿಸುವ ಇಸ್ರೇಲಿನ ನೀತಿಯನ್ನು ತಿರಸ್ಕರಿಸುವುದಾಗಿ ಗನೂಷಿ ಹೇಳಿದರು.

ಸ್ವತಂತ್ರ ದೇಶದ ಫೆಲಸ್ತೀನಿ ಜನರ ಹಕ್ಕುಗಳಿಗೆ ನಾವು ಅಂಗೀಕಾರ ನೀಡುತ್ತೇವೆ. ಅಲ್ ಕುದ್ಸ್ ರಾಜಧಾನಿಯಾಗಿರುವ ಸ್ವತಂತ್ರ ದೇಶ ಸ್ಥಾಪಿಸಬೇಕೆಂದು ಗನೂಷಿ ಹೇಳಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.