ಕೊರೊನಾ ವೈರಸ್ ಜತೆ ಬದುಕಲು ನಾವು ಕಲಿಯಬೇಕು: ಆರೋಗ್ಯ ಇಲಾಖೆ

0
639

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮೇ 9: ಕೊರೊನಾ ವೈರಸ್ ಜೊತೆ ಬದುಕಲು ಭಾರತೀಯರು ಅಭ್ಯಾಸ ಮಾಡಿಕೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ. ಸಾಮಾಜಿಕ ಅಂತರ ಪಾಲಿಸುವುದು, ಶುಚಿತ್ವ ಅಭ್ಯಾಸ ಇಟ್ಟುಕೊಳ್ಳುವುದು ಇತ್ಯಾದಿ ನಿರ್ದೇಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾ ಹೊಸ ರೀತಿಯಲ್ಲಿ ಸಾಮಾಜಿಕ ಜೀವನಕ್ಕೆ ಮರಳಲು ನಾವು ಪ್ರಯತ್ನಿಸಬೇಕಾಗಿದೆ. ಜೊತೆಗೆ ಜೂನ್ ಜುಲೈ ತಿಂಗಳಲ್ಲಿ ಕೊರೊನಾ ರೋಗ ಹೆಚ್ಚುವ ಸಾಧ್ಯತೆ ಇದೆ ಎಂದು ಏಮ್ಸ್ ನ ಡಾ. ರಣದೀಪ್ ಗುಲೇರಿಯ ಕಳೆದ ದಿವಸ ಹೇಳಿದ್ದಾರೆ. ವಲಸೆ ಕಾರ್ಮಿಕರು ಮರಳುವುದರೊಂದಿಗೆ ಕೆಲವು ವಿನಾಯಿತಿಗಳನ್ನು ನೀಡಬೇಕಾಗಿದೆ. ವೈರಸ್‍ನೊಂದಿಗೆ ಜೀವಿಸಬೇಕಾದರೆ ನಾವು ನಮ್ಮ ಅಭ್ಯಾಸಗಳಲ್ಲಿ ಬದಲಾವಣೆ ತರಬೇಕಾಗುತ್ತದೆ. ವೈರಸ್‍ನೊಂದಿಗೆ ಜೀವಿಸಲು ನಾವು ಅಭ್ಯಾಸ ಮಾಡಬೇಕು. ಇದಕ್ಕೆಲ್ಲ ಸಮಾಜದ ಬೆಂಬಲ ಅತ್ಯಗತ್ಯ ಇದೆ ಎಂದು ಸಚಿವಾಲಯದ ವಕ್ತಾರ ಲವ್ ಅಗರ್‍ವಾಲ್ ತಿಳಿಸಿದರು.

ಲಾಕ್ ಡೌನ್ ಹಿಂಪಡೆಯಲು ಮತ್ತು ಪೂರ್ವ ಸ್ಥಿತಿಗೆ ದೇಶ ಮರಳಲು ಬಹಳಷ್ಟು ಸಮಯ ಬೇಕಾಗಿದೆ. ದೇಶದಲ್ಲಿ 216 ಜಿಲ್ಲೆಗಳಲ್ಲಿ ಇದುವರೆಗೆ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. 42 ಜಿಲ್ಲೆಗಳಲ್ಲಿ 28 ದಿವಸಗಳಲ್ಲಿ ಮತ್ತು 29 ಜಿಲ್ಲೆಗಳಲ್ಲಿ 21 ದಿವಸಗಳಲ್ಲಿ ಹೊಸ ಕೇಸುಗಳು ವರದಿಯಾಗಿಲ್ಲ. 36 ಜಿಲ್ಲೆಗಳಲ್ಲಿ 21 ದಿವಸಗಳ ಹೊಸ ರೋಗಗಳು ವರದಿಯಾಗಿಲ್ಲ. 36 ಜಿಲ್ಲೆಗಳಲ್ಲಿ 14 ದಿವಸಗಳಿಂದ ಮತ್ತು 46 ಜಿಲ್ಲೆಗಳಲ್ಲಿ 7 ದಿವಸಗಳಿಂದ ಹೊಸ ಕೇಸುಗಳು ವರದಿಯಾಗಿಲ್ಲ ಎನ್ನುವುದು ಸ್ವಲ್ಪ ಸಮಾಧಾನದ ವಿಷಯವಾಗಿದೆ.

ಮಹಾರಾಷ್ಟ್ರ , ಗುಜರಾತ್, ದಿಲ್ಲಿಯಲ್ಲಿ ಮಾತ್ರ ರೋಗ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ. ಇನ್ನು ರೋಗ ಉಲ್ಬಣವಾದೀತೆ ಎಂಬ ವಿಷಯದಲ್ಲಿ ಏನು ಮಾಡಬಹುದು ಮತ್ತು ಮಾಡಬಾರದು ಎಂಬುದಾಗಿ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ನಿಯಂತ್ರಣಗಳನ್ನು ಪಾಲಿಸಿದರೆ ಕೊರೊನಾ ರೋಗ ಉಲ್ಬಣಿಸುವುದಿಲ್ಲ ಎಂದು ಸಚಿವಾಲಯದ ವಕ್ತಾರ ತಿಳಿಸಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.