ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮೇ.28: ದೇಶದಲ್ಲಿ ಒಂದು ತಿಂಗಳಲ್ಲಿ 12.2 ಕೋಟಿ ಜನರು ಉದ್ಯೋಗ ಕಳಕೊಂಡಿದ್ದಾರೆ ಎಂದು ಮುಂಬೈಯ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ತಿಳಿಸಿದೆ.
ಕೆಲಸ ತೀವ್ರ ನಷ್ಟವಾಗಿದ್ದು ದಿನಗೂಲಿಗಳಿಗೆ, ಸಣ್ಣ ವ್ಯಾಪಾರಿಗಳಿಗೆ ,ಹಳೆವಸ್ತು ವ್ಯಾಪಾರಿಗಳಿಗೆ, ಬೀದಿ ಮಾರಾಟಗಾರರಿಗೆ, ನಿರ್ಮಾಣ ಕಾಮಗಾರಿಯ ಕಾರ್ಮಿಕರಿಗೆ, ತಳ್ಳುಗಾಡಿ, ಆಟೋ ರೀಕ್ಷಾದವರಿಗೆ.
ಇವರೆಲ್ಲರೂ ಮುಖ್ಯವಾಗಿ ಕೊರೋನಾ ಹಾವಳಿಯಿಂದ ಉದ್ಯೋಗವಿಲ್ಲದಂತಾಗಿದ್ದಾರೆ. ಲಾಕ್ಡೌನ್, ಕೊರೊನಾ ರೋಗಬಾಧೆ, ಇವರಿಗೆ ಹಸಿವನ್ನು ಕರುಣಿಸಿತು. ಕಟುಬಡತನಕ್ಕೆ ತುತ್ತಾದರು ಎಂದು ಲೆಕ್ಕಗಳು ಸೂಚಿಸುತ್ತಿವೆ.
ಕೆಲಸ ಕಳಕ್ಕೊಂಡಿದ್ದಲ್ಲದೆ, ನಿರುದ್ಯೋಗ ದೇಶದಲ್ಲಿ ವಿಷಮ ಪರಿಸ್ಥಿತಿ ಹುಟ್ಟುಹಾಕಿದೆ. ನಿರುದ್ಯೋಗ ದರ ಒಂದು ವರ್ಷದೊಳಗೆ ಉತ್ತಮಪಡಿಸಲು ಸಾಧ್ಯವಿದೆ ಎಂದು ನಮಗೆ ನಂಬಿಕೆಯಿಲ್ಲ ಎಂದು ಐಪಿಇ ಗ್ಲೋಬಲ್ ಮ್ಯಾನೇಂಜಿಂಗ್ ಡೈರಕ್ಟರ್ ಅಶ್ವಜಿತ್ ಸಿಂಗ್ ಹೇಳಿದ್ದಾರೆ.
ಭಾರತವನ್ನು ಬಡತನದಿಂದ ದಡಕ್ಕೆ ತಲುಪಿಸಲು ಇದುವರೆ ನಡೆದ ಪ್ರಯತ್ನಗಳೆಲ್ಲವೂ ಕೆಲವು ತಿಂಗಳೊಳಗೆ ಅಪ್ರಯೋಜಕವೆಂದು ಸಾಬೀತಾಗಿದೆ. ಕೊರೋನ ರೋಗದಿಂದ ಮೃತರಾಗಿದ್ದಕ್ಕಿಂತ ಹೆಚ್ಚು ಹಸಿವಿನಿಂದ ಸತ್ತರು ಎಂದು ಅವರು ಹೇಳಿದರು. 10.4 ಕೋಟಿ ಜನರು ವಿಶ್ವಬ್ಯಾಂಕ್ ನಿಶ್ಚಯಿಸಿದ ವ್ಯಾಪ್ತಿ ಪ್ರಕಾರ ಬಡತನ ರೇಖೆಗಿಂತ ಕೆಳಗಿದ್ದಾರೆ. ಈಗ ದೇಶದಲ್ಲಿ ಶೇ.60ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಆದರೆ ಈಗ ಶೇ68ಕ್ಕೆ ಏರಿಕೆಯಾಗಿದೆ.
ಹತ್ತು ವರ್ಷಗಳ ಹಿಂದೆ ಎದುರಿಸಿದ ಬಿಕ್ಕಟ್ಟು ಇನ್ನು ದೇಶ ಎದುರಿಸಬೇಕಾಗುವುದು. ದೇಶದ ಆರ್ಥಿಕ ಬೆಳವಣಿಗೆ ವರ್ಷಗಳಿಂದ ಮಾಂದ್ಯದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್ಡೌನ್ ಇದಕ್ಕೆ ಇನ್ನಷ್ಟು ಘಾಸಿ ನೀಡಿದಂತಾಯಿತು ಎಂದು ಅವರು ಹೇಳುತ್ತಾರೆ.
ದೇಶದ 27 ರಾಜ್ಯಗಳಲ್ಲಿ ಎಪ್ರಿಲ್ನಲ್ಲಿ ನಡೆಸಿದ ಸಮೀಕ್ಷೆಯನ್ನು ಸಿಎಂಐಇ ಹೊರಬಿಟ್ಟಿದೆ. ಇದಕ್ಕಾಗಿ 5800 ಕುಟುಂಗಳಿಂದ ಮಾಹಿತಿ ಸಂಗ್ರಹಿಸಿಲಾಗಿದೆ. ದೇಶದ ಶೇ.80ರಷ್ಟು ಕುಟುಂಬಗಳ ವರಮಾನವು ಲಾಕ್ಡೌನ್ ಕಾಲದಲ್ಲಿ ಕಡಿಮೆಯಾಯಿತು. ಬಡತನ ವಿಭಾಗಗಳಿಗೆ ಒಂದು ರೂಪಾಯಿ ವರಮಾನ ಇಲ್ಲದಾಗಿದೆ. ಇದೇ ವೇಳೆ ಖರ್ಚು ಹೆಚ್ಚಳವಾಗುತ್ತಿದೆ ಎಂದು ಲೆಕ್ಕಗಳು ತಿಳಿಸುತ್ತಿವೆ.
ಲಾಕ್ಡೌನ್ ಘೋಷಿಸಿದ ಬೆನ್ನಿಗೆ ರೈತರಿಗೂ ಬಡವರಿಗೂ ಆಹಾರವಸ್ತು ನೇರ ವಿತರಿಸುವುದು ಮತ್ತು ಅವರ ಖಾತೆಗಳಿಗೆ ಹಣವನ್ನು ಹಾಕುವುದಾಗಿ ಕೇಂದ್ರ ಸರಕಾರ ಹೇಳಿತ್ತು. ಆದರೆ ದೇಶದ ಬಹುಭಾಗಗಳಲ್ಲಿ ಈ ಯೋಜನೆ ಫಲವನ್ನು ಕಂಡಿಲ್ಲ. ಅಲ್ಲದೇ ಈ ಯೋಜನೆ ಫಲಪ್ರದವಾಗಿ ಜಾರಿಗೆ ಬಂದಿಲ್ಲ. ಹೆಚ್ಚಿನ ಉತ್ತರಭಾರತದ ಗ್ರಾಮಗಳ ಮನೆಗಳಲ್ಲಿ ಆಯಾ ಪ್ರದೇಶದಲ್ಲಿ ಸಿಗುವ ಹಣ್ಣುಗಳು, ಹಸಿರೆಲೆಗಳನ್ನು ಆಹಾರವಾಗಿ ಉಪಯೋಗಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಕೊರೋನ ಪರಿಸ್ಥಿತಿಯಲ್ಲಿ ಮಾರ್ಚ್ 24ಕ್ಕೆ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸಿದ್ದರು. ದೇಶದ ಎಲ್ಲ ಉದ್ಯಮ ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾದವು. ವಲಸೆ ಕಾರ್ಮಿಕರು ಸಾವಿರಾರು ಕಿಲೋಮೀಟರ್ ಕಾಲು ನಡಿಗೆಯಲ್ಲಿ, ಸೈಕಲ್ನಲ್ಲಿ ತಮ್ಮ ಹುಟ್ಟೂರು ಗ್ರಾಮಗಳಿಗೆ ಮರಳಿದರು. ಉದ್ಯೋಗ ನಷ್ಟ ಹಸಿವು ಲಕ್ಷಾಂತರ ಕಾರ್ಮಿಕರ ಪಲಾಯನಕ್ಕೆ ಕಾರಣವಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












