ಕೊರೋನಕ್ಕೆ ಸೆಗಣಿಯುಕ್ತ ಪಂಚಗವ್ಯ ಮದ್ದು; ಪರೀಕ್ಷಿಸಲು ಸಜ್ಜಾದ ಗುಜರಾತ್

0
777

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಮೇ 28: ಕೊರೋನ ಚಿಕಿತ್ಸೆಗೆ ಸೆಗಣಿಯುಕ್ತ ಆಯುರ್ವೇದ ಮದ್ದು ಕಂಡು ಹುಡುಕಿದ್ದಾಗಿ ಗುಜರಾತ್ ಸರಕಾರದ ಅಧೀನ ರಾಷ್ಟೀಯ ಕಾಮಧೇನು ಆಯೋಗ್ ಅಧ್ಯಕ್ಷ ಡಾ.ವಲ್ಲಭ್ ಕಟಾರಿಯ ಹೇಳಿಕೊಂಡಿದ್ದು ದನದ ಸೆಗಣಿ, ಮೂತ್ರ ,ಹಾಲು, ತುಪ್ಪ, ಬೆಣ್ಣೆಯಿರುವ ಪಂಚಗವ್ಯದಿಂದ ಮದ್ದು ತಯಾರಿಸಿದ್ದೆಂದಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನ ರೋಗಿಗಳಿಗೆ ನೀಡಿ ಇದನ್ನು ಕ್ಲಿನಿಕಲ್ ಪರೀಕ್ಷೆ ಮಾಡುತ್ತೇವೆ ಎಂದ ಅವರು ದೇಶದ ಹತ್ತು ಆಸ್ಪತ್ರೆಗಳಲ್ಲಿ ಟ್ರಯಲ್ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿಯ ಕ್ಷೇತ್ರ ರಾಜ್‍ಕೋಟ್‍ನ ಸಿವಿಲ್ ಆಸ್ಪತ್ರೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರಯೋಗ ಆರಂಭವಾಗಲಿದೆ ಎಂದು ತಿಳಿಸಿದರು.

ನಂತರ ಹೈದರಾಬಾದ್, ಸೂರತ್ ,ಪುಣೆ, ಅಹ್ಮದಾಬಾದ್ ಹಾಗೂ ಜೋಧಪುರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಆಧುನಿಕ ವೈದ್ಯಕೀಯದ ಮಾನದಂಡಗಳ ಆಧಾರದಲ್ಲಿಯೇ ಮದ್ದು ಪ್ರಯೋಗ ಎಂದವರು ಕಟಾರಿಯ ಹೇಳಿದ್ದಾರೆ.

ಹಾಲು, ಬೆಣ್ಣೆ, ತುಪ್ಪು,ಸೆಗಣಿ,ಮೂತ್ರದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದ್ದು, ಇದು ಪಂಚಗವ್ಯವಾಗಿದೆ. ಕಾಲಕಾಲದಿಂದ ಭಾರತದಲ್ಲಿ ಉಪಯೋಗಿಸಲಾಗುತ್ತಿದೆ.ಕೆಲವು ರೋಗಗಳಿಗೆ ಗೋಮೂತ್ರ, ಸೆಗಣಿ ಉಪಯುಕ್ತ ಎಂದು ಆಯುರ್ವೇದ ದಾಖಲೆಗಳು ತಿಳಿಸುತ್ತಿವೆ.

ಕೊರೋನಾ ಚಿಕಿತ್ಸೆಗೆ ಇದರಿಂದ ನಿರ್ಮಿಸಿದ ಮದ್ದಿನ ಫಲಿತಾಂಶವನ್ನು ಪರಿಶೀಲಿಸಲು ಈಗ ಸಿದ್ಧತೆ ನಡೆಯುತ್ತಿದೆ. ಈ ಪ್ರಯೋಗಕ್ಕೆ ಒಪ್ಪುವ ರೋಗಿಗಳಿಗೆ ಮಾತ್ರ ಪಂಚಗವ್ಯ ನೀಡಲಾಗುವುದು. ಇದರ ಪ್ರಗತಿಯನ್ನು ವೈಜ್ಞಾನಿಕವಾಗಿ ದಾಖಲಿಸಲಾಗುವುದು. ಕ್ಲಿನಿಕಲ್ ಟ್ರಯಲ್ ಮಾನದಂಡಗಳ ಪ್ರಕಾರ ವಿಶ್ಲೇಷಣೆಯೂ ನಡೆಯಲಿದೆ. ವಿವಿಧ ಕೇಂದ್ರಗಳಲ್ಲಿ ಪ್ರಯೋಗ ಸಫಲವಾದರೆ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲಾಗುವುದು ಎಂದು ಕಟಾರಿಯ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು‌ ಬೆಂಬಲಿಸಿ.