ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.20: ದೇಶದ ಗ್ರಾಮದ ಜನರಿಗೆ ಕೆಲಸದ ಅವಕಾಶಗಳ ಸೃಷ್ಟಿಸಲು ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಚುನಾವಣೆ ನಡೆಯುವ ಬಿಹಾರದಲ್ಲಿ ಯೋಜನೆಯ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಉದ್ಘಾಟಿಸಿದ್ದು ಲಾಕ್ಡೌನ್ ಸಮಯದಲ್ಲಿ ಬಹುತೇಕ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದಾರೆ. ಕೊರೋನದ ಮುಂಚೆ ಅವರು ನಗರ ಕಟ್ಟುವಲ್ಲಿ ಪಾಲ್ಗೊಂಡಿದ್ದರು. ಇನ್ನು ಸ್ವಂತ ಗ್ರಾಮಗಳಲ್ಲಿಯೇ ಕೆಲಸ ಕೊಡುವುದು ನಮ್ಮ ಪ್ರಯತ್ನ ಎಂದು ಪ್ರಧಾನಿ ಹೇಳಿದರು.
ನನ್ನ ಕಾರ್ಮಿಕ ಮಿತ್ರರೇ, ದೇಶ ನಿಮ್ಮ ಭಾವನೆಗಳು ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಂಡಿದೆ. ಹೊಸದಾಗಿ ಆರಂಭಿಸಲಾಗುತ್ತಿರುವ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ ನಿಮ್ಮ ಅಗತ್ಯವನ್ನು ಈಡೇರಿಸಲಿದೆ ಎಂದು ಪ್ರಧಾನಿ ಜನರನ್ನು ಉದ್ದೇಶಿಸಿ ಪ್ರಧಾನಿ ಹೇಳಿದರು.
ಕಾರ್ಮಿಕರಿಗೆ ಅವರ ಗ್ರಾಮದಲ್ಲಿಯೇ ಕೆಲಸ ಸಿಗಬೇಕಾಗಿದೆ. ನಿಮ್ಮ ನೈಪುಣ್ಯ ನಗರಗಳನ್ನು ಕಟ್ಟಲು ಬಳಸಿದರಿ ಇನ್ನು ನೀಉವ ಗ್ರಾಮಗಳ ಅಭಿವೃದ್ಧಿಯಲ್ಲಿ ಭಾಗಿಯಾಗಿ ಎಂದು ಪ್ರಧಾನಿ ಹೇಲಿದರು. 116 ಜಿಲ್ಲೆಗಳ ವಲಸೆ ಕಾರ್ಮಿಕರಿಗೆ 25ರಷ್ಟು ಕ್ಷೇತ್ರಗಳಲ್ಲಿ 125 ದಿನದ ಕೆಲಸ ದೃಢಪಡಿಸುವುದು ಯೋಜನೆಯ ಗುರಿಯಾಗಿದೆ. ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಝಾರ್ಕಂಡ್ ,ಒಡಿಸ್ಸಾ, ರಾಜಸ್ಥಾನದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು. ಲಕ್ಷಾಂತರ ಕಾರ್ಮಿಕರು ಈ ರಾಜ್ಯಗಗಳಿಗೆ ಉದ್ಯೋಗವಿಲ್ಲದೆ ಮರಳಿ ಬಂದಿದ್ದಾರೆ. ಯೋಜನೆಗಾಗಿ 50,000 ಕೋಟಿ ರೂಪಾಯಿಯನ್ನು ಸರಕಾರ ಮೀಸಲಿರಿಸಲಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












