ಲಿಬಿಯಾದ ಸಾಮೂಹಿಕ ಗೋರಿಗಳು: ಮಾನವಹಕ್ಕು ಉಲ್ಲಂಘನೆಯ ತನಿಖೆಗೆ ವಿಶ್ವಸಂಸ್ಥೆಯಿಂದ ಆದೇಶ

0
657

ಸನ್ಮಾರ್ಗ ವಾರ್ತೆ

ಟ್ರಿಪೋಲಿ,ಜೂ.23: ಲಿಬಿಯಾದ ಪರಿಸ್ಥಿತಿ ಅರಿತುಕೊಳ್ಳುವುದಕ್ಕೆ ತಂಡವೊಂದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಉನ್ನತ ವಿಭಾಗವು ನೇಮಕಗೊಳಿಸಿದೆ. ಈ ಇತ್ತೀಚೆಗೆ ಲಿಬಿಯಾದಲ್ಲಿ ಕಂಡು ಬಂದಿರುವ ಸಾಮೂಹಿಕ ಗೋರಿಗಳು ಯುದ್ಧ ಅಪರಾಧ ಆಗಬಹುದು ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ಪ್ರಾಸಿಕ್ಯೂಟರ್ ಹೇಳಿದ್ದರು.ತದನಂತರ ತನಿಖೆ ನಡೆಸಲು ವಿಶ್ವಸಂಸ್ಥೆ ಆದೇಶಿಸಿತು.

ಲಿಬಿಯಾದಲ್ಲಿ ನಡೆಯುವ ಎಲ್ಲ ಅತಿಕ್ರಮಗಳನ್ನು ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಖಂಡಿಸಿದೆ. ವಿಶ್ವಸಂಸ್ಥೆ ಮಾನವಹಕ್ಕು ವಿಭಾಗ ಮುಖ್ಯಸ್ಥ ಮಿಶೆಲ್ ಬಾಚ್‍ಲೆಟ್ ಉತ್ತರ ಆಫ್ರಿಕಾದ ದೇಶಗಳ ಅವಸ್ಥೆಯನ್ನು ತಿಳಿದುಕೊಳ್ಳುವುದಕ್ಕಾಗಿ ತಂಡವೊಂನ್ನು ಕಳುಹಿಸುವ ವಿಚಾರದಲ್ಲಿ ಎಲ್ಲ ಸದಸ್ಯರ ಬೆಂಬಲ ಪಡೆದಿದ್ದು ಈ ಕ್ರಮವನ್ನು ನಿರ್ಧರಿಸಿದ್ದಾರೆ.

ಪ್ರಧಾನ ತೈಲೋತ್ಪಾದಕ ದೇಶ ಲಿಬಿಯಾ 2011ರಿಂದ ಅರಾಜಕತೆಯ ಸ್ಥಿತಿಯಲ್ಲಿದೆ. ನ್ಯಾಟೊದ ಬೆಂಬಲದಿಂದ ನಡೆದ ಸೈನಿಕ ಕಾರ್ಯಾಚರಣೆಯಲ್ಲಿ ಲಿಬಿಯಾದ ಅಧ್ಯಕ್ಷ ಮುಅಮ್ಮರ್ ಗದ್ದಾಫಿಯವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರ ನಂತರ ದೇಶ ಅರಾಜಕ ಸ್ಥಿತಿಯನ್ನು ಎದುರಿಸುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.