ಬಸ್ಸಿನಲ್ಲಿ ಕೊರೋನ ಪೀಡಿತ ದಂಪತಿಗಳ ಪ್ರಯಾಣ; ಕಂಡಕ್ಟರ್ ಬೊಬ್ಬೆ ಕೇಳಿ ಓಡಿ ಹೋದ ಸಹ ಪ್ರಯಾಣಿಕರು!

0
1928

ಸನ್ಮಾರ್ಗ ವಾರ್ತೆ

ಚೆನ್ನೈ,ಜೂ.24: ಕೊರೋನ ಪೀಡಿತ ದಂಪತಿಗಳು ಬಸ್ಸಿನಲ್ಲಿದಾರೆ ಎಂದು ಅರಿತು ಸಹಪ್ರಯಾಣಿಕರು ಬಸ್ಸಿನಿಂದ ಇಳಿದು ಓಡಿಹೋಗಿ ವಿಭ್ರಾಂತಿ ಸೃಷ್ಟಿಸಿದ ಘಟನೆ ಸೋಮವಾರ ಮಧ್ಯಾಹ್ನ ತಮಿಳ್ನಾಡಿನ ಕಡಲೂರು ಜಿಲ್ಲೆಯ ಪನರುಟ್ಟಿ -ವಡಲ್ಲೂರ್ ರೂಟ್‍ನಲ್ಲಿ ನಡೆದಿದೆ.

ಕ್ಷಯ ರೋಗ ರೋಗಕ್ಕೆ ಚಿಕಿತ್ಸೆ ಪಡೆದ ವಡಲ್ಲೂರಿನ 57 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಅವರು ಮತ್ತು ಅವರ ಪತ್ನಿಯ ಗಂಟಲಿನ ದ್ರವವನ್ನು ಕೊರೋನ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅಧಿಕಾರಿಗಳು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿರಬೇಕು ಎಂದು ಹೇಳಿದ್ದರು.

ಆದರೆ, ಸೋಮವಾರ ದಂಪತಿ ಮನೆ ಬಂದ್ ಮಾಡಿ ಸಂಬಂಧಿಕರನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದರು. ಈ ನಡುವೆ ಪರೀಕ್ಷೆಯ ಫಲಿತಾಂಶ ಬಂದು ಕೊರೋನ ಪಾಸಿಟಿವ್ ಎಂದು ತಿಳಿಸುವುದಕ್ಕೆ ಆರೋಗ್ಯ ಕಾರ್ಯಕರ್ತರು ಹೋದಾಗ ಮನೆ ಬಾಗಿಲು ಹಾಕಿತ್ತು. ಮೊಬೈಲ್‍ ಸಂಪರ್ಕಿಸಿದಾಗ ದಂಪತಿ ಬಸ್‍ನಲ್ಲಿ ಪ್ರಯಾಣಿಸುತ್ತಿರುವುದು ಗೊತ್ತಾಗಿದೆ. ಕೊರೋನ ಇದೆ ಎಂದು ಕಂಗೆಟ್ಟಿದ್ದ ರೋಗಿಯೊಂದಿಗೆ ಕಂಡಕ್ಟರ್‌ಗೆ ಫೋನ್ ಕೊಡಲು ಆರೋಗ್ಯ ಕಾರ್ಯಕರ್ತರು ಹೇಳಿದರು. ಇದು ತಮಿಳ್ನಾಡು ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಬಸ್‍ನಲ್ಲಿ ನಡೆದ ಘಟನೆ.

ವಿಷಯ ತಿಳಿದ ಕಂಡಕ್ಟರ್ ಚಲಿಸುತ್ತಿರುವ ಬಸ್‌ನಲ್ಲಿ ಬೊಬ್ಬೆ ಹೊಡೆದಿದ್ದಾನೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾನೆ. ಕೊರೋನ ಪೀಡಿತರಿಂದ ಹಣ ಪಡೆದು ಟಿಕೆಟ್ ನೀಡಿದ್ದು, ಮೊಬೈಲ್ ಫೋನ್‍ನಲ್ಲಿ ಮಾತಾಡಿದ್ದು ಕಂಡೆಕ್ಟರ್‍‌ನಲ್ಲಿ ಭಯವುಂಟು ಮಾಡಿತ್ತು. ಇದೇ ವೇಳೆ, ಬಸ್‍ನಲ್ಲಿದ್ದ 15 ಮಂದಿ ಇಳಿದು ಓಡಿ ಹೋಗಿದ್ದಾರೆ. ನಂತರ ಬಸ್ ಸಿಬ್ಬಂದಿ ಮತ್ತು ಕೆಲವು ಪ್ರಯಾಣಿಕರನ್ನು ವಡಲ್ಲೂರ್ ಸರಕಾರಿ ಆಸ್ಪತ್ರೆಯಲ್ಲಿ ಕೊರೋನ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋದರು. ದಂಪತಿಯನ್ನು ಆಂಬುಲೆನ್ಸಿನಲ್ಲಿ ಚಿದಂಬರಂ ರಾಜಾಮುತ್ತಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ ಕೂಡಲೇ ಅಣು ಮುಕ್ತಗೊಳಿಸಲಾಗಿದ್ದು, ಬಸ್‍ನಿಂದ ಮೊದಲು ಇಳಿದು ಓಡಿದ ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ