ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜೂ.25: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೃಹತ್ ಸೋಲನ್ನು ಅನುಭವಿಸುತ್ತಾರೆ ಎಂದು ಡೆಮಕ್ರಾಟಿಕ್ ಪಾರ್ಟಿಯ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ದೇಶದ ಇಂದಿನ ಪರಿಸ್ಥಿತಿ ಪರಿಹರಿಸಲು ಮತ್ತು ದೇಶವನ್ನು ಸಾಮಾನ್ಯ ಸ್ಥಿತಿಗೆ ತರಲು ಜೊ ಬೈಡನ್ರಿಗಿಂತ ಉತ್ತಮವಾಗಿ ಯಾರಿಗೂ ಸಾಧ್ಯವಿಲ್ಲ ಎಂದು ಒಬಾಮ ಹೇಳಿದರು.
ಕಳೆದ ಆಡಳಿತದ ವಿರುದ್ಧ ದೇಶಾದ್ಯಂತ ಯುವಕರ ನಡುವೆ ದೊಡ್ಡ ಜಾಗೃತಿ ಮೂಡಿದೆ. ಅದು ಸೃಷ್ಟಿಸುವ ದೊಡ್ಡ ಮಟ್ಟದ ಶುಭ ನಿರೀಕ್ಷೆಯನ್ನು ಹುಟ್ಟುಹಾಕುತ್ತಿದೆ ಎಂದು ಒಬಾಮ ಹೇಳಿದರು.
ಇದೇ ವೇಳೆ, ಅಮೆರಿಕದಲ್ಲಿ ರಾಜಕೀಯ ಬದಲಾವಣೆ ಅಗತ್ಯವೆಂದು ಬೈಡನ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು. ಜಾಗತಿಕ ನಾಯಕರು ಡೊನಾಲ್ಡ್ ಟ್ರಂಪ್ರ ಮೇಲೆ ಅತೃಪ್ತಿ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












