ಸನ್ಮಾರ್ಗ ವಾರ್ತೆ
ಪಾಲಕ್ಕಾಡ್,ಜೂ.25: ಮಣ್ಣಾರ್‍ಕಾಡ್ ಭೀಮನಾಡ್ ಎಂಬಲ್ಲಿ ಆರು ವರ್ಷದ ಬಾಲಕನನ್ನು ತಾಯಿ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ. ಒಂಬತ್ತು ವರ್ಷದ ಮಗು ಮನೆಯ ಅಂಗಳದಲ್ಲಿ ಅಳುವುದನ್ನು ನೋಡಿ ನೆರೆಮನೆಯವರು ಓಡಿ ಬಂದಾಗ ಆರು ವರ್ಷದ ಮಗು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ನಂತರ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಹುಡುಗನ ಕೊಲೆ ಯಾವಾಗ ನಡೆದಿದೆ ಎಂದು ಸ್ಪಷ್ಟವಾಗಿಲ್ಲ. ಮಗುವಿನ ಕೊರಳಿನಲ್ಲಿ ಇರಿತದ ಗಾಯವಿದೆ. ಬಾಲಕನ ತಾಯಿ ಮಾನಸಿಕ ಅಸ್ವಸ್ಥೆಯೆಂದು ಪೊಲೀಸರು ಹೇಳಿದ್ದಾರೆ. ಪೆರಿಂದಲ್‍ಮಣ್ಣ ಖಾಸಗಿ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆದು ಮರಳಿದ್ದರು. ತದನಂತರ ಅಂತಹ ಸಮಸ್ಯೆಗಳಿರಲಿಲ್ಲ. ಎರ್ನಾಕುಳಂನಲ್ಲಿ ಬಾಲಕನ ತಂದೆ ಕೆಲಸ ಮಾಡುತ್ತಿದ್ದಾರೆ. ಇವರಿಗೂ ವಿಷಯ ತಿಳಿಸಲಾಗಿದ್ದು, ಬಾಲಕ ಮೃತದೇಹ ಮಣ್ಣಾರ್ ಕ್ಕಾಡ್ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












