ಕೊರೋನ ಗಾಳಿಯ ಮೂಲಕವೂ ಹರಡಬಲ್ಲುದು- ಸಂಶೋಧನಾ ವರದಿ

0
791

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜು.6: ಕೊರೋನ ಗಾಳಿಯ ಮೂಲಕವೂ ಹರಡುವುದೆಂದು ವಿಜ್ಞಾನಿಗಳು ಹೇಳಿದ್ದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. 32 ದೇಶಗಳ 239 ವಿಜ್ಞಾನಿಗಳಿರುವ ತಂಡದಿಂದ ಹೊಸ ಸಂಶೋಧನೆ ಇದು. ದಿ ನ್ಯೂಯಾರ್ಕ್‌ನಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ.

ಕೊರೋನ ಮನುಷ್ಯರಿಂದ ಮನುಷ್ಯರಿಗೆ ಗಾಳಿಯಲ್ಲಿಯೂ ಹರಡುವುದಕ್ಕೆ ಪುರಾವೆಗಳಿವೆ ಎಂದು ಮಾರ್ಗಸೂಚಿ ನಿರ್ದೇಶನಗಳಲ್ಲಿ ಸುಧಾರಣೆ ಅಗತ್ಯವಿದೆ ಎಂದು ವಿಜ್ಞಾನಿಗಳು ವಿಶ್ವ ಆರೊಗ್ಯ ಸಂಘಟನೆಗೆ ಪತ್ರ ಬರೆದಿದ್ದು, ಹೊಸ ಶೋಧನೆಗೆ ಸಂಬಂಧಪಟ್ಟು ಮುಂದಿನ ವಾರ ವಿಜ್ಞಾನ ಜರ್ನಲ್‍ನಲ್ಲಿ ಪ್ರಕಟಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದು ಪತ್ರದಲ್ಲಿ ವಿಜ್ಞಾನಿಗಳು ಹೇಳಿದ್ದಾರೆ.

ಸೋಂಕು ಬಾಧಿತರು ಕೆಮ್ಮಿದರೆ, ಸೀನಿದರೆ ರೋಗ ಹರಡುವುದೆಂದು ಈ ಹಿಂದೆ ವಿಶ್ವ ಆರೋಗ್ಯ ಸಂಘಟನೆ ಹೇಳಿತ್ತು. ಇದೇ ವೇಳೆ, ಕೊರೋನಾ ಗಾಳಿಯಲ್ಲಿ ಹರಡುತ್ತಿರುವುದು ಕಂಡು ಬಂದಿಲ್ಲ ಎಂದೇ ಈವರೆಗೂ ಅದು ಹೇಳಿಕೊಂಡು ಬಂದಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.