ಸನ್ಮಾರ್ಗ ವಾರ್ತೆ
ಬಗ್ದಾದ್, ಜು.8: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಸಂಘಟನೆಯ ಕುರಿತು ವಿಶದವಾದ ಅಧ್ಯಯನ ಮಾಡಿದ ಇರಾಕಿ ಸಂಶೋಧಕ ಗುಂಡಿಗೆ ಬಲಿಯಾಗಿದ್ದಾರೆ. ಬಲಿಯಾದವರು ಹಿಶಾಮ ಅಲ್ ಹಾಸ್ಮಿ, ಅವರಿಗೆ 47 ವರ್ಷ ವಯಸ್ಸಾಗಿತ್ತು.
ಬಾಗ್ದಾದಿನ ಸಿಯೊನ ಪ್ರದೇಶದಲ್ಲಿ ತನ್ನ ಮನೆಯ ಸಮೀಪದಲ್ಲಿ ಅವರು ಗುಂಡಿಗೆ ಬಲಿಯಾದರು. ಗುಂಡೇಟಿಗೀಡಾದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅವರು ಮೃತಪಟ್ಟರೆಂದು ವರದಿ ತಿಳಿಸಿದೆ.
ಇರಾಕಿನ ಸಶಸ್ತ್ರ ವಿಭಾಗಗಳ ಕುರಿತು ಐಎಸ್ ಕುರಿತು ವಿವರವಾದ ಅಧ್ಯಯನ-ಸಂಶೋಧನೆಗಳನ್ನು ಅವರು ಮಾಡುತ್ತಿದ್ದರು. ಅವರು ಇತಿಹಾಸಕಾರನಾಗಿದ್ದಾರೆ. ಇರಾನ್ ಬೆಂಬಲಿತ ಸಶಸ್ತ್ರ ತಂಡದಿಂದ ಅವರಿಗೆ ಬೆದರಿಕೆ ಇತ್ತೆಂದು ಗೃಹ ಸುರಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಪೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












