ಕೊರೋನಾದಿಂದ ಚೇತರಿಸಿಕೊಂಡ ಮಹಿಳೆಯನ್ನು ಮನೆಗೆ ತಲುಪಿಸಲು ತಡರಾತ್ರಿ 8 ಗಂಟೆಗಳ ಕಾಲ ಆಟೋ ಚಲಾಯಿಸಿದ ಮಹಿಳೆ: ಮಣಿಪುರ ಮುಖ್ಯಮಂತ್ರಿಯಿಂದ ಸನ್ಮಾನ

0
715

ಸನ್ಮಾರ್ಗ ವಾರ್ತೆ

ಇಂಫಾಲ್,ಜು.8: ಕೊರೋನದಿಂದ ಚೇತರಿಸಿಕೊಂಡ ಮಹಿಳೆಯನ್ನು ಮನೆಗೆ ತಲುಪಿಸಲು 52 ವರ್ಷದ ಲಾಯ್ಬಿ ಓಯೆನಮ್ ಎಂಬ ಮಹಿಳೆಯೊಬ್ಬರು ತಡರಾತ್ರಿ 140 ಕಿ.ಮೀಗಳವರೆಗೆ ಆಟೋರಿಕ್ಷಾ ಚಲಾಯಿಸುವ ಮೂಲಕ ಕಳೆದ ತಿಂಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಗೆ ಒಳಗಾಗಿದ್ದರು.

ಇಂಫಾಲ್‌ನಲ್ಲಿರುವ ಸರ್ಕಾರಿ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆ ಕರೋನಾದಿಂದ ಚೇತರಿಸಿಕೊಂಡಾಗ, ಆಂಬುಲೆನ್ಸ್ ಮೂಲಕ ಮನೆಗೆ ಹೋಗಲು ನಿರಾಕರಿಸಿದಳು. ಈ ಬಗ್ಗೆ ಲಾಯ್ಬಿಗೆ ತಿಳಿದು ಬಂತು. ಕೂಡಲೇ ಮಹಿಳೆಯನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.

 

ಈ ಮಹಿಳೆಯನ್ನು ಇಂಫಾಲ್‌ನಿಂದ ಕಾಮ್‌ಜಾಂಗ್ ಜಿಲ್ಲೆಗೆ ಕರೆದೊಯ್ಯಲು ಲಾಯ್ಬಿ ರಾತ್ರಿ 8 ಗಂಟೆಗಳ ಕಾಲ ಪ್ರಯಾಣಿಸಿದರು. ಮಣಿಪುರ ಮುಖ್ಯಮಂತ್ರಿ ಎನ್.ಎನ್. ಬಿರೆನ್ ಸಿಂಗ್ ಲಾಯ್ಬಿಗೆ 1,10,000 ರೂ. ನೀಡುವ ಮೂಲಕ ಅವರ ಸೇವೆಯನ್ನು ಪೋತ್ಸಾಹಿಸಿದರು. ಲಾಯ್ಬಿ, ತನ್ನ ತಾಯಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಇಂಫಾಲ್‌ನ ಪೆಂಗೈ ಮಾರುಕಟ್ಟೆಯಲ್ಲಿ ವಾಸಿಸುತ್ತಾಳೆ. ಆಕೆಯ ಕುಟುಂಬದಲ್ಲಿ ಲಾಯ್ಬಿ ಮಾತ್ರ ಉದ್ಯೋಗಿಯಾಗಿದ್ದಾರೆ.

ಜನರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಲಾಯ್ಬಿಯ ಈ ಕೆಲಸವನ್ನು ಶ್ಲಾಘಿಸಿದ್ದಾರೆ ಮತ್ತು ಅವರನ್ನು ನಿಜವಾದ ಹಿರೋ ಎಂದು ಕರೆದಿದ್ದಾರೆ. ಲಿಬ್ಬಿ ಬೀದಿ ಬದಿ ವ್ಯಾಪಾರಿ, ಅವರು ಒಣ ಮೀನುಗಳನ್ನು ಸಹ ಮಾರಾಟ ಮಾಡುತ್ತಾರೆ.
ರಸ್ತೆಯಲ್ಲಿ ಇಬ್ಬರು ಈ ಬಗ್ಗೆ ಮಾತನಾಡುವುದನ್ನು ನಾನು ಕೇಳಿದ್ದೆ ಎಂದು ಅವರು ಹೇಳುತ್ತಾರೆ.

ಆಟೋ ಡ್ರೈವರ್ ಸಿಗದ ಕಾರಣ ಅವರು ಅಸಮಾಧಾನಗೊಂಡಿದ್ದರು. ಈ ಮಹಿಳೆಯ ಬದಲು ನಾನು ಆಸ್ಪತ್ರೆಯಿಂದ ಚೇತರಿಸಿಕೊಂಡಿದ್ದರೆ ಮತ್ತು ಯಾರೂ ನನ್ನನ್ನು ಬಿಟ್ಟು ಹೋಗದಿದ್ದರೆ ನಾನು ಎಷ್ಟು ಅಸಮಾಧಾನಗೊಳ್ಳಬಹುದೆಂದು ನಾನು ಭಾವಿಸಿದೆ. ಈ ಆಲೋಚನೆಯೊಂದಿಗೆ, ನಾನು ಈ ಮಹಿಳೆಗೆ ಸಹಾಯ ಮಾಡಲು ನಿರ್ಧರಿಸಿದೆ ಎಂದು ಲಾಯ್ಬಿ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.