ಸನ್ಮಾರ್ಗ ವಾರ್ತೆ
ಕೊಚ್ಚಿ,ಜು.8:ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ದಾಖಲೆ ಮಾಡಿದೆ. 200 ರೂಪಾಯಿ ಹೆಚ್ಚಿ ಪವನ್‍ಗೆ 36,320 ರೂಪಾಯಿಯಾಗಿದೆ. ಗ್ರಾಮ್‍ಗೆ 25 ರೂಪಾಯಿ ಹೆಚ್ಚಿದ್ದು, 4540ಕ್ಕೆ ತಲುಪಿತು. ಹಿಂದೆ ದಾಖಲೆ ಬೆಲೆಯೇರಿಕೆ ಯಾದ ನಂತರ ರೇಟು ಕುಸಿದಿತ್ತು. ಈಗ ಮತ್ತೆ ಹೆಚ್ಚಳವಾಗಿದೆ.
ಜುಲೈ ಒಂದರಂದು ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಯಾಗಿತ್ತು.ನಿನ್ನೆ ಪವನಿಗೆ 320ರೂಪಾಯಿ ಹೆಚ್ಚಿಗೆಯಾಯಿತು. ಇದೇ ವೇಳೆ ನಿರಂತವಾಗಿ 3 ದಿನಗಳಲ್ಲಿ ಬೆಲೆಯಲ್ಲಿ ಸ್ಥಿರತಯಿತ್ತು. ನಂತರ ಸೋಮವಾರ 160 ರೂ. ಕಡಿಮೆಯಾಗಿ 35,800 ಚಿನ್ನದ ಬೆಲೆಯಾಗಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












