ಅಂಬೇಡ್ಕರ್ ‌ರವರ ಮುಂಬೈ ನಿವಾಸದ ಮೇಲೆ ಅಜ್ಞಾತರಿಂದ ದಾಳಿ

0
618

ಸನ್ಮಾರ್ಗ ವಾರ್ತೆ

ಮುಂಬೈ,ಜು.8: ಡಾ. ಬಿ.ಆರ್ ಅಂಬೇಡ್ಕರ್‌ರವರ ಮುಂಬೈನ ಮನೆಯ ಮೇಲೆ ದಾಳಿ ನಡೆದಿದೆ. ಮುಂಬೈಯ ದಾದರಿನ ರಾಜಗೃಹ ಎಂಬ ಸ್ಮಾರಕ ಮಂದಿರದಲ್ಲಿ ಅಜ್ಞಾತರು ಮಂಗಳವಾರ ಸಂಜೆ ಆರು ಗಂಟೆಗೆ ದಾಂಧಲೆ ನಡೆಸಿದ್ದು ಕಟ್ಟಡದ ಮನೆಯ ಮುಂದಿನ ಹೂ-ಗಿಡಗಳ ಕುಂಡಗಳನ್ನು ನಾಶಪಡಿಸಿ ಸಿಸಿ ಟಿವಿ ಕ್ಯಾಮರಾ ಪುಡಿ ಮಾಡಲು ಯತ್ನಿಸಿದ್ದಾರೆ.

ಅಂಬೇಡ್ಕರ್ ಸ್ಮಾರಕ ಮ್ಯೂಸಿಯಂ ಕೂಡ ಈ ಮೂರು ಮಹಡಿ ಕಟ್ಟದಲ್ಲಿ ಇದೆ. ಲಾಕ್‌ಡೌನ್ ನಂತರ ಇಲ್ಲಿಗೆ ಸಂದರ್ಶಕರನ್ನು ಅನುಮತಿಸಲಾಗಿಲ್ಲ. ಘಟನೆಯ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಆದೇಶಿಸಿದ್ದಾರೆ.

ದಾಳಿಯ ಹೆಸರಿನಲ್ಲಿ ಯಾರೂ ಪ್ರಚೋದನೆಗೆ ಒಳಗಾಗಬಾರದೆಂದು ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದಾರೆ. ಮುಂಬೈಯಲ್ಲಿ ನೆಲೆಸಿದ ನಂತರ 1930ರಲ್ಲಿ ಅಂಬೇಡ್ಕರ್ ಈ ಮೂರು ಮಹಡಿಯ ಕಟ್ಟಡ ಕಟ್ಟಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.