ಪ್ರಧಾನಿ ಮೋದಿಯನ್ನು ಟೀಕಿಸಿದ ವಿದ್ಯಾರ್ಥಿನಿಗೆ ಕೊಲೆ ಬೆದರಿಕೆ

0
2173

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.8: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಅಸ್ಸಾಮಿನ ವಿದ್ಯಾರ್ಥಿನಿಗೆ ಕೊಲೆ ಬೆದರಿಕೆ ಬಂದಿದೆ. ಸರಕಾರವನ್ನು ಟೀಕಿಸಿದರರೆ ಕೊಲ್ಲುತ್ತೇವೆ ಎಂದು ಅಜ್ಞಾತ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ಆಕ್ಟಿವಿಸ್ಟ್ ಮತ್ತು ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿ ಯೂನಿಯನ್ (ಆಂಸು) ಕಾರ್ಯದರ್ಶಿ ಹಸೀನಾ ಅಹ್ಮದ್ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪ್ರಧಾನಿಯವರ ಲಡಾಕ್ ಸಂದರ್ಶನವನ್ನು ವಿದ್ಯಾರ್ಥಿನಿ ಟೀಕಿಸಿ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಳು. ನಂತರ ಇಬ್ಬರು ಕರೆ ಮಾಡಿ ಗಂಭೀರ ಅತ್ಯಾಘಾತವನ್ನು ಎದುರಿಸಬೇಕಾದೀತೆಂದು ಬೆದರಿಕೆಯೊಡ್ಡಿದ್ದಾರೆ. ಪ್ರಧಾನಿಯನ್ನು ಟೀಕಿಸುವುದು ಕೊನೆಗೊಳಿಸದಿದ್ದರೆ 2017ರಲ್ಲಿ ಕೊಲೆಯಾದ ಲಫಿಕುಲ್ ಇಸ್ಲಾಮ್‍ನ ಅವಸ್ಥೆ ಎದುರಿಸಬೇಕಾದೀತು ಎಂದು ಒಬ್ಬ ಹೇಳಿದ್ದಾನೆ.

ಬೊಡೊಲ್ಯಾಂಡ್ ಅಲ್ಪಸಂಖ್ಯಾತ ವಿದ್ಯಾರ್ಥಿ ಯುನಿಯನ್ (ಎಬಿಎಂಎಸ್‍ಯು) ಅಧ್ಯಕ್ಷರಾಗಿದ್ದ ಲಫೀಕುಲ್ ಇಸ್ಲಾಂರನ್ನು 2017 ಆಗಸ್ಟ್ ಒಂದರಂದು ಅಸ್ಸಾಮನ ಕೊಕ್ರಜರ್‌ನಲ್ಲಿ ಅಜ್ಞಾತ ತಂಡ ಗುಂಡು ಹಾರಿಸಿ ಕೊಂದು ಹಾಕಿತ್ತು. ಮೂರು ವರ್ಷ ಕಳೆದರೂ ಘಟನೆಯಲ್ಲಿ ಯಾರನ್ನೂ ಶಿಕ್ಷಿಸಲಾಗಿಲ್ಲ.

ಹಸೀನಾರ ದೂರಿನಲ್ಲಿ ಐಪಿಸಿ 294,506 ಕಲಂ ಪ್ರಕಾರ ಕೇಸು ದಾಖಲಿಸಲಾಗಿದೆ. ಹಸೀನಾ ಕಾನೂನು ವಿದ್ಯಾರ್ಥಿನಿಯಾಗಿದ್ದು ಪೌರತ್ವ ಹೋರಾಟ, ಪರಿಸರ ಹೋರಾಟದಲ್ಲಿ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ. ತನಗೆ ಬೆದರಿಕೆ ಹಾಕಿದ ಇಬ್ಬರೂ ಅಸ್ಸಾಮಿಸ್ ಭಾಷೆಯನ್ನು ಮಾತಾಡಿದ್ದಾರೆ. ಘಟನೆ ತಿಳಿದ ಮೇಲೆ ಸಂಖ್ಯಲಘು ಸಂಗ್ರಾಂ ಪರಿಷತ್, ಟಿಟ್ರೈಬ್, ನಾರಿ ಶಕ್ತಿ ಮೊದಲಾದ ಹಲವು ಸಂಘಟನೆಳು ಬುದ್ಧಿಜೀವಿಗಳು ತನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹಸೀನಾ ದಿ ವಯರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.