ಸನ್ಮಾರ್ಗ ವಾರ್ತೆ
ನವ ದೆಹಲಿ,ಜು.9: ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 7,69,052 ಕ್ಕೆ ಏರಿಕೆಯಾಗಿದೆ. ದಾಖಲೆಯ 25,559 ಹೊಸ ಸೋಂಕು ಪ್ರಕರಣಗಳು ಬುಧವಾರ ವರದಿಯಾಗಿವೆ. ಈ ಅಂಕಿಅಂಶಗಳು covid19india.orgನ್ನು ಆಧರಿಸಿವೆ.
ದೆಹಲಿಯ ಚೇತರಿಕೆ ಪ್ರಮಾಣ 74.57%ಕ್ಕೆ ಹೆಚ್ಚಾಗಿದ್ದು, 1,04,864 ಪ್ರಕರಣಗಳಲ್ಲಿ 78,199 ರೋಗಿಗಳನ್ನು ಗುಣಪಡಿಸಲಾಗಿದೆ.
ಮತ್ತೊಂದೆಡೆ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಸಂಜೆ 5 ಗಂಟೆಯಿಂದ ರಾಜ್ಯದ ಕಂಟೈನ್ಮೆಂಟ್ ವಲಯದಲ್ಲಿ ಲಾಕ್ಡೌನ್ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಪ್ರಸ್ತುತ ಇದು ಕೇವಲ 7 ದಿನಗಳವರೆಗೆ ಇರುತ್ತದೆ. ಅಗತ್ಯವಿದ್ದರೆ ಇದನ್ನು ಇನ್ನಷ್ಟು ಹೆಚ್ಚಿಸಬಹುದು.
ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗೃಹ ಸಚಿವ ಮತ್ತು ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಬುಧವಾರ ಮಾತನಾಡಿ ಭಾನುವಾರದಿಂದ ಇಡೀ ಮಧ್ಯಪ್ರದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಆಗಲಿದೆ. ಇತರ ರಾಜ್ಯಗಳಿಂದ ಬರುವ ಜನರಿಂದಾಗಿ ರಾಜ್ಯದ ಪರಿಸ್ಥಿತಿ ಬದಲಾಗುತ್ತಿದೆ. ರಾಜ್ಯದಲ್ಲಿ ಬರುವ ಮತ್ತು ಹೋಗುವ ಜನರನ್ನು ಗಡಿಯಲ್ಲಿ ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












