ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.15: ದಿಲ್ಲಿ ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದ ಐದು ದೇಶಗಳ ಪ್ರಜೆಗಳಿಗೆ ದಂಡ ವಿಧಿಸಿ ಕೋರ್ಟು ಬಿಡುಗಡೆಗೊಳಿಸಿದೆ. ವೀಸಾ ನಿಯಮವನ್ನು ಉಲ್ಲಂಘನೆ, ಕೊರೋನ ನಿಯಂತ್ರಣದ ನಿಯಮೋಲ್ಲಂಘನೆ ಸಹಿತ ಕೇಸುಗಳನ್ನು ವಿದೇಶೀ ಪ್ರಜೆಗಳ ವಿರುದ್ಧ ಹೊರಿಸಲಾಗಿತ್ತು. ಇವರು ಶಿಕ್ಷೆಯ ಕಡಿಮೆಗಾಗಿ ಭಾಗಶಃ ಆರೋಪ ಸಮ್ಮತಿಸುವ ಅರ್ಜಿ ಸಲ್ಲಿಸಿದ ಬಳಿಕ ಬಿಡುಗಡೆಯಾಗಿದೆ. ಈ ಕ್ರಮವನ್ನು ಪೊಲೀಸರು ವಿರೋಧಿಸಲಿಲ್ಲ.
ಜಿಬೂಟ್ಟಿ, ಮಾಲಿ, ಕೆನ್ಯ, ಮ್ಯಾನ್ಮಾರಿನ ಮತ್ತು ಹದಿನೇಳು ಶ್ರೀಲಂಕಾದವರನ್ನು 5,000 ಜುರ್ಮಾನೆ ವಿಧಿಸಿ ದಿಲ್ಲಿ ಕೋರ್ಟು ಬಿಡುಗಡೆಗೊಳಿಸಿದೆ. ಮೂವರು ಶ್ರೀಲಂಕದವರು ನೈಜೀರಿಯಾ, ಟಾನ್ಸಾನಿಯ ಮುಂತಾದೆಡೆಯವರು ಕೋರ್ಟಿನಲ್ಲಿ ವಿಚಾರಣೆ ಎದುರಿಸುವುದಾಗಿ ಹೇಳಿದರು.
ಸಮ್ಮೇಳನದಲ್ಲಿ ಭಾಗವಹಿಸಿದ 150 ಇಂಡೊನೇಷಿಯರಿಗೆ ಜಾಮೀನು ನೀಡಲಾಗಿದೆ. ಜಾಮೀನಿಗೆ ತಲಾ 10,000 ರೂಪಾಯಿ ಬಾಂಡ್ ಮಾಡಲಾಗಿದೆ. ಇವರು ಕೂಡ ಭಾಗಶಃ ಅಪರಾಧ ಸಮ್ಮತ ನಡೆಸಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಇದರ ನಡುವೆ, ಸಮ್ಮೇಳನದಲ್ಲಿ ಭಾಗವಹಿಸಿದ 150 ಇಂಡೊನೇಷಿಯರಿಗೆ ಕೋರ್ಟುನಿಂದ ಜಾಮೀನು ಸಿಕ್ಕಿದೆ. ವೀಸಾ ನಿಯಮ ಉಲ್ಲಂಘನೆ, ಕೊರೋನ ನಿಯಂತ್ರಣ ನಿಯಮ ಉಲ್ಲಂಘನೆ ಕೇಸು ಇವರ ಮೇಲಿದೆ. ಜಾಮೀನಿಗೆ ಹತ್ತು ಸಾವಿರ ರೂಪಾಯಿಯಂತೆ ಇವರು ಭರಿಸಬೇಕು. ಬುಧವಾರ ಶಿಕ್ಷೆ ವಿನಾಯಿತಿಗಾಗಿ ಭಾಗಶಃ ಆರೋಪ ಒಪ್ಪುವ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












