ಸನ್ಮಾರ್ಗ ವಾರ್ತೆ
ನವದೆಹಲಿ,ಜು.17: ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ರಾಜಕಾರಣಿಗಳು ರಾಜಧಾನಿಯಲ್ಲಿ ಫೆಬ್ರವರಿ ಗಲಭೆಗೆ ಮುಂಚಿತವಾಗಿ ನೀಡಿದ ಪ್ರಚೋದನಾತ್ಮಕ ಭಾಷಣಗಳ ಮೂಲಕ “ಕೋಮು ಪ್ರಚೋದನಾತ್ಮಕ ಭಾವನೆಗಳನ್ನು ಹುಟ್ಟುಹಾಕಿದ್ದಾರೆ” ಎಂದು ದೆಹಲಿ ಅಲ್ಪಸಂಖ್ಯಾತ ಆಯೋಗ ಆರೋಪಿಸಿದೆ.
ಗಲಭೆಯ ಸಂದರ್ಭದಲ್ಲಿ “ಪೊಲೀಸರು ಇದಕ್ಕೆ ಸಹಕರಿಸಿದರು ಮತ್ತು ದಾಳಿ ನಡೆಸಿದರು”, ಇದು 53 ಜನರನ್ನು ಕೊಂದಿತು ಮತ್ತು ಅವರು ಆರೋಪಿಗಳಿಗಿಂತ ಬಲಿಪಶುಗಳನ್ನೇ ಬಂಧಿಸಿದರು ಎಂದು ವರದಿಯು ಹೇಳಿದೆ.
ಫೆಬ್ರವರಿ 8ರ ವಿಧಾನಸಭಾ ಚುನಾವಣೆಯಲ್ಲಿ ಸೋತ ದೆಹಲಿಯ ಮಾಜಿ ಸಚಿವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಫೆಬ್ರವರಿ 23 ರಂದು ಮೌಜ್ಪುರದಲ್ಲಿ ಮಾಡಿದ ಭಾಷಣದ ಮೂಲಕ ಗಲಭೆಯನ್ನು ಪ್ರಚೋದಿಸಿದರು ಎಂಬುದು ಸಮಿತಿಯ ವರದಿಯಲ್ಲಿನ ಒಂದು ಪ್ರಮುಖ ಆರೋಪವಾಗಿದೆ.
ಸುಪ್ರೀಂ ಕೋರ್ಟ್ನ ವಕೀಲ ಎಂ.ಆರ್.ಶಮ್ಶಾದ್ ನೇತೃತ್ವದ ‘ಸತ್ಯ ಶೋಧನಾ ಸಮಿತಿ’ ತನ್ನ ವರದಿಯನ್ನು ದೆಹಲಿ ಕ್ಯಾಬಿನೆಟ್, ಸ್ಪೀಕರ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಜುಲೈ 13 ರಂದು ಸಲ್ಲಿಸಿದೆ.
“ದೆಹಲಿ ವಿಧಾನಸಭಾ ಚುನಾವಣೆ 2020:ದ್ವೇಷ ಪ್ರಚಾರ ಭಾಷಣಗಳು ಮತ್ತು ದೆಹಲಿಯಲ್ಲಿ ಕೋಮು ಭಾವನೆಗಳಿಗೆ ಧಕ್ಕೆ” ಎಂಬ ಪ್ಯಾರಗ್ರಾಫ್ ಶೀರ್ಷಿಕೆಯ ವರದಿಯಲ್ಲಿ ಅಮಿತ್ ಶಾ, ಆದಿತ್ಯನಾಥ್, ಮಿಶ್ರಾ ಮತ್ತು ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಅನುರಾಗ್ ಠಾಕೂರ್, ಸಂಸದರಾದ ಪರ್ವೇಶ್ ವರ್ಮಾ ಮತ್ತು ತೇಜಸ್ವಿ ಸೂರ್ಯ, ಮತ್ತು ಇತರ ಬಿಜೆಪಿ ಪ್ರಚಾರಕರನ್ನು ಹೆಸರಿಸಲಾಗಿದೆ.
ಅದು ಹೀಗೆ ಹೇಳುತ್ತದೆ: “ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸ್ಪಷ್ಟವಾಗಿ ಬಿಜೆಪಿ ನಾಯಕರು ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬಹಿರಂಗವಾಗಿ ನಿಂದಿಸುವುದು ಮತ್ತು ಅವರ ಉದ್ದೇಶಗಳನ್ನು ಯಾವುದೇ ಆಧಾರವಿಲ್ಲದೇ ಪ್ರಶ್ನಿಸುವುದು, ಕೋಮುವಾದಿ ಹೇಳಿಕೆಗಳು ಮತ್ತು ಮುಕ್ತ ಹಿಂಸಾಚಾರದ ಬೆದರಿಕೆಗಳನ್ನು ಹೊರಿಸುವುದು, ಮತ್ತು ಶಾಹೀನ್ ಬಾಗ್ ಪ್ರತಿಭಟನೆಗಳನ್ನು, ವಿಶೇಷವಾಗಿ, ‘ಶಾಹೀನ್ ವಿರೋಧಿ’ ನಿರೂಪಣೆಯನ್ನು ನಿರ್ಮಿಸಲು ನಕಾರಾತ್ಮಕ ಅಂಶಗಳನ್ನು ಬಿತ್ತರಿಸುವ ಪ್ರಕ್ರಿಯೆ ನಡೆದಿದೆ” ಎಂದು ವರದಿ ಮಾಡಿತ್ತು.
ವರದಿಯಲ್ಲಿ ಉಲ್ಲೇಖಿಸಲಾದ ಭಾಷಣಗಳಲ್ಲಿ ಜನವರಿ 27 ರಂದು ಷಾ ಅವರು ಹೀಗೆ ಹೇಳಿದರು: “ಬಿಜೆಪಿ ಅಭ್ಯರ್ಥಿಗೆ ನಿಮ್ಮ ಮತವು ದೆಹಲಿ ಮತ್ತು ದೇಶವನ್ನು ಸುರಕ್ಷಿತವಾಗಿಸುತ್ತದೆ ಮತ್ತು ಶಾಹೀನ್ ಬಾಗ್ ನಂತಹ ಸಾವಿರಾರು ಘಟನೆಗಳನ್ನು ತಡೆಯುತ್ತದೆ.” ಎಂದಿದ್ದರು.
ಫೆಬ್ರವರಿ 2 ರಂದು ಆದಿತ್ಯನಾಥ್ ಹೀಗೆ ಹೇಳಿದ್ದರು; “(ಮುಖ್ಯಮಂತ್ರಿ ಅರವಿಂದ್) ಕೇಜ್ರಿವಾಲ್ ಮತ್ತು ಅವರ ಮಂಡಳಿ (ಗುಂಪು) ಶಾಹೀನ್ ಬಾಗ್ ಪ್ರತಿಭಟನೆಯನ್ನು ಮೌನವಾಗಿ ಬೆಂಬಲಿಸುವ ಮೂಲಕ ಅಶಾಂತಿ ಮತ್ತು ಅರಾಜಕತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರತಿಭಟನೆಗಳು 370 ನೇ ವಿಧಿಯನ್ನು ರದ್ದುಗೊಳಿಸುವುದರ ವಿರುದ್ಧ ಮತ್ತು ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ದೇವಾಲಯದ ನಿರ್ಮಾಣದ ವಿರುದ್ಧವಾಗಿದೆ” ಎಂದಿದ್ದರು.
ಪ್ರತಿಭಟನಾಕಾರರನ್ನು “ಶೂಟ್ ಮಾಡುವಂತೆ ಕರೆ” ನೀಡಿದ ಠಾಕೂರ್ ಹೇಳಿಕೆ.
ಪ್ರತಿಭಟನಾಕಾರರನ್ನು ಬಲ ಪ್ರಯೋಗಿ ಓಡಿಸಿರೆಂದು ಹೇಳಿದ ಕಪಿಲ್ ಮಿಶ್ರಾ, ತಾನು ಮತ್ತು ತನ್ನ ಬೆಂಬಲಿಗರು ವಿಷಯಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತೇವೆ ಸ್ಪಷ್ಟವಾಗಿ ಹೇಳಿದ್ದರು, ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡುತ್ತಾ,”ಮೂರು ದಿನಗಳ ನಂತರ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರ ಮಾತನ್ನು ಕೇಳುವುದಿಲ್ಲ…” ಎಂಬ ದ್ವೇಷ ಭಾಷಣವನ್ನು ಮಾಡಿದ್ದರು ಎಂದು ಆಯೋಗವು ತನ್ನ ವರದಿಯಲ್ಲಿ ವಿಸ್ತೃತವಾಗಿ ಉಲ್ಲೇಖಿಸಿದೆ.
ಹಿಂಸಾಚಾರವು ನಡೆದು ನಾಲ್ಕು ತಿಂಗಳುಗಳು ಸಂದರೂ ದಂಗೆ ಪೀಡಿತರಿಗೆ ಪರಿಹಾರವು “ವಿಳಂಬವಾಗಿದೆ ಮತ್ತು ಹಕ್ಕುಗಳಿಗೆ ಅಸಮವಾಗಿದೆ” ಎಂದು ವರದಿಯು ಆರೋಪಿಸಿದೆ.
ಈ ಬಗ್ಗೆ ಕೇಳಿದಾಗ, CMO ಅಧಿಕಾರಿಯೊಬ್ಬರು ಹೀಗೆ ಹೇಳಿದ್ದು, “ನಾವು ಈ ವರದಿಯನ್ನು ಅಧ್ಯಯನ ಮಾಡುತ್ತೇವೆ ಮತ್ತು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತೋರಿದಲ್ಲಿ ನಾವು ಕ್ರಮಕ್ಕೆ ಮುಂದಾಗುತ್ತೇವೆ” ಎಂದಿದ್ದಾರೆ.
ಕೃಪೆ: ದಿ ಟೆಲಿಗ್ರಾಫ್
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












